ಜಯಪುರ: ವಿದ್ಯುತ್ ಶಾರ್ಟ್ ಸರ್ಕಿಟ್‌ನಿಂದಾಗಿ ಕಬ್ಬಿನ ಗದ್ದೆಗೆ ಬೆಂಕಿ ಹತ್ತಿ ಉರಿದ ಘಟನೆ ಗುರುವಾರ ಹೋಬಳಿಯ ಅರಸನಕೆರೆ ಗ್ರಾಮದಲ್ಲಿ ಸಂಭವಿಸಿದೆ.
ರೈತ ಶಿವಣ್ಣ ನಾಯಕ ಎಂಬುವರು ತಮ್ಮ ಎರಡು ಎಕರೆಯಲ್ಲಿ ಬೆಳೆದ ಕಬ್ಬಿಗೆ ಬೆಂಕಿ ಬಿದ್ದಿತ್ತು ಮಾಹಿತಿ ತಿಳಿದ ಅಗ್ನಿಸಾಮಕ ದಳದವರು ಬಂದು ಬೆಂಕಿ ನಂದಿಸಿದರು. ಅಷ್ಟರಲ್ಲಿ ಸುಮಾರು ಅರ್ಧದಷ್ಟು ಬೆಳೆ ಸುಟ್ಟು ಹೋಗಿದೆ.
ಸ್ಥಳಕ್ಕೆ ಅಗ್ನಿಶಾಮಕ ದಳದವರು ಬಂದು ಬೆಂಕಿ ನಂದಿಸಿದ್ದಾರೆ. ಸಾಲ ಮಾಡಿ ಬೆಳೆದಿದ್ದು ಕಬ್ಬು ಬೆಳೆ ಸುಟ್ಟುಹೋಗಿದ್ದು
‘ಬೆಂಕಿಯಿಂದ ₹ 4 ಲಕ್ಷ ನಷ್ಟವಾಗಿದೆ. ಕಂದಾಯ ಇಲಾಖೆಯವರು ಪರಿಹಾರ ನೀಡಬೇಕು’ ಎಂದು ರೈತ ಶಿವಣ್ಣ ನಾಯಕ ಮನವಿ ಮಾಡಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.