ಪಿರಿಯಾಪಟ್ಟಣ: ಪ್ರಾಥಮಿಕ ಕೃಷಿ ಭೂ ಅಭಿವೃದ್ಧಿ ಬ್ಯಾಂಕ್ (ಪಿಎಲ್‌ಡಿ ಬ್ಯಾಂಕ್) ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ನಿರ್ದೇಶಕ ಕೊತ್ತವಳ್ಳಿ ಗ್ರಾಮದ ಕೆ.ಹೊಲದಪ್ಪ ಹಾಗೂ ಉಪಾಧ್ಯಕ್ಷರಾಗಿ ಚಾಮರಾಯ ಕೋಟೆ ಗ್ರಾಮದ ಮಮತಾ ಕುಮಾರಸ್ವಾಮಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಭಾನುವಾರ ಚುನಾವಣೆ ನಡೆಯಿತು. ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ಸಹಕಾರ ಅಭಿವೃದ್ಧಿ ಅಧಿಕಾರಿ ಅನುಸೂಯ ಆಯ್ಕೆಯನ್ನು ಘೋಷಣೆ ಮಾಡಿದರು.
ನೂತನ ಅಧ್ಯಕ್ಷ ಕೆ. ಹೊಲದಪ್ಪ ಮಾತನಾಡಿ, ಸಚಿವ ಕೆ.ವೆಂಕಟೇಶ್ ಅವರ ಸಲಹೆ, ಸಹಕಾರ ಮತ್ತು ಮಾರ್ಗದರ್ಶನದಲ್ಲಿ ರೈತ ಪರವಾದ ಕೆಲಸ ಮಾಡುತ್ತೇನೆ ಎಂದರು.
ತಾಲ್ಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ನಿತಿನ್ ವೆಂಕಟೇಶ್ ಮಾತನಾಡಿ, ತಾಲ್ಲೂಕಿನಲ್ಲಿ ಕಾಂಗ್ರೆಸ್ ಸದೃಢವಾಗಿದೆ. ಸ್ಥಳೀಯ ಸಂಸ್ಥೆಗಳಿಂದ ಹಿಡಿದು ಸಹಕಾರ ಕ್ಷೇತ್ರದವರೆಗೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳೇ ಜಯಗಳಿಸುತ್ತಿದ್ದಾರೆ. ಇದು ತಾಲ್ಲೂಕಿನಲ್ಲಿ ಕಾಂಗ್ರೆಸ್ ಉತ್ತಮವಾದ ಸಂಘಟನೆಯನ್ನು ಹೊಂದಿರುವುದಕ್ಕೆ ಸಾಕ್ಷಿ ಎಂದರು.
ಈ ಪಿಎಲ್‌ಡಿ ಬ್ಯಾಂಕ್‌ನಲ್ಲಿ ಒಟ್ಟು 14 ನಿರ್ದೇಶಕ ಸ್ಥಾನಗಳಿದ್ದು, ಇವುಗಳಲ್ಲಿ 11 ಸ್ಥಾನಗಳಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳೇ ಜಯ ಗಳಿಸಿದ್ದಾರೆ. ಸತತವಾಗಿ 3ನೇ ಬಾರಿಗೆ ಕಾಂಗ್ರೆಸ್ ಬೆಂಬಲಿತರು ಅಧಿಕಾರ ನಡೆಸುತ್ತಿರುವುದು ಸಂತಸ ತಂದಿದೆ ಎಂದರು. ಅಧಿಕಾರಾವಧಿಯಲ್ಲಿ ರೈತರಿಗೆ ಹೆಚ್ಚಿನ ಸಹಕಾರ ನೀಡಬೇಕು, ಎಲ್ಲಾ ಸದಸ್ಯರಿಗೂ ಬ್ಯಾಂಕಿನ ಸೌಲಭ್ಯ ಮತ್ತು ಅವಕಾಶ ದೊರಕಲಿದೆ ಎಂದು ತಿಳಿಸಿದರು.
ಈ ವೇಳೆ ಕೃಷಿ ಭೂ ಅಭಿವೃದ್ಧಿ ನಿರ್ದೇಶಕರಾದ ಹಿಟ್ನಹಳ್ಳಿ ಪರಮೇಶ್, ತೆಲುಗಿನಕುಪ್ಪೆ ಟಿ. ಡಿ. ನಾಗರಾಜ್, ಅಲ್ಪ ನಾಯಕನಹಳ್ಳಿ ಶಿವಣ್ಣ, ಸುಳುಗೋಡು, ಮಂಜುನಾಥ್, ಆಲನಹಳ್ಳಿ ರಾಜಣ್ಣ, ಮುತ್ತೂರು ಸುರೇಶ, ಪ್ರಮೀಳಾ, ಬೆಮ್ಮತ್ತಿ ರವಿ, ಪೊನಾಡಹಳ್ಳಿ ರೋಹಿಣಿ, ಪ್ರತಿಪ, ಮಾಜಿ ಅಧ್ಯಕ್ಷ ಇ.ಪಿ. ಲೋಕೇಶ್. ಪುರಸಭೆ ಸದಸ್ಯ ರಾಜೇಶ್, ಕಾಂಗ್ರೆಸ್ ಮುಖಂಡರಾದ ಕಲ್ಯಾಣಪ್ಪ, ಸಿದ್ದೇಗೌಡ, ಶಿವಶಂಕರ್, ಮುಖಂಡರಾದ ಪುಟ್ಟಮಾದೇಗೌಡ, ರಾಜೇಗೌಡ, ಕೀರ್ತಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.