ADVERTISEMENT

ಶುದ್ಧ ಜಲ ಉತ್ತಮ ಆರೋಗ್ಯಕ್ಕೆ ಬಲ: ಅಕ್ರಮ ಸಕ್ರಮ ಸಮಿತಿಯ ಸದಸ್ಯ ಕೆಂಡಗಣ್ಣೇಗೌಡ

​ಪ್ರಜಾವಾಣಿ ವಾರ್ತೆ
Published 4 ಜನವರಿ 2026, 5:33 IST
Last Updated 4 ಜನವರಿ 2026, 5:33 IST
ಹಂಪಾಪುರ ಹೋಬಳಿಯ ಚಿಕ್ಕೆರೆಯೂರು ಗ್ರಾಮದ ಶಾಲ ಆವರಣದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್‌ ಚಿಕ್ಕೆರೆಯೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಹಭಾಗಿತ್ವದಲ್ಲಿ ನಡೆದ ‘ಶುದ್ಧ ಜಲ ಆರೋಗ್ಯಕ್ಕೆ ಬಲ’ ಕಾರ್ಯಕ್ರಮವನ್ನು ಕೆಂಡಗಣ್ಣೇಗೌಡ ಉದ್ಘಾಟಿಸಿದರು
ಹಂಪಾಪುರ ಹೋಬಳಿಯ ಚಿಕ್ಕೆರೆಯೂರು ಗ್ರಾಮದ ಶಾಲ ಆವರಣದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್‌ ಚಿಕ್ಕೆರೆಯೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಹಭಾಗಿತ್ವದಲ್ಲಿ ನಡೆದ ‘ಶುದ್ಧ ಜಲ ಆರೋಗ್ಯಕ್ಕೆ ಬಲ’ ಕಾರ್ಯಕ್ರಮವನ್ನು ಕೆಂಡಗಣ್ಣೇಗೌಡ ಉದ್ಘಾಟಿಸಿದರು   

ಹಂಪಾಪುರ: ಶುದ್ಧ ಕುಡಿಯುವ ನೀರಿನ ಮಹತ್ವ ಅರಿಯಬೇಕು. ಆರೋಗ್ಯ ಚೆನ್ನಾಗಿದ್ದರೆ ಗಳಿಕೆ ಮತ್ತು ಉಳಿಕೆ ಮಾಡಲು ಸಾಧ್ಯ ಎಂದು ಅಕ್ರಮ ಸಕ್ರಮ ಸಮಿತಿಯ ಸದಸ್ಯ ಕೆಂಡಗಣ್ಣೇಗೌಡ ತಿಳಿಸಿದರು.

ಹೋಬಳಿಯ ಚಿಕ್ಕೆರೆಯೂರು ಗ್ರಾಮದ ಶಾಲ ಆವರಣದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್‌ ಚಿಕ್ಕೆರೆಯೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಹಭಾಗಿತ್ವದಲ್ಲಿ ನಡೆದ ‘ಶುದ್ಧ ಜಲ ಆರೋಗ್ಯಕ್ಕೆ ಬಲ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮನುಷ್ಯನ ಜೀವಿತ ಅವಧಿಯಲ್ಲಿ ನೀರು ಬಹಳ ಪ್ರಮುಖ ಪಾತ್ರ ವಹಿಸುತ್ತದೆ, ಕಲುಷಿತ ಮತ್ತು ಗಡಸು ನೀರಿನಿಂದ ಅನೇಕ ರೋಗಗಳಿಗೆ ತುತ್ತಾಗುತ್ತಿರುವುದನ್ನು ಇತ್ತೀಚಿನ ದಿನಗಳಲ್ಲಿ ನಾವೆಲ್ಲರೂ ಕಾಣುತ್ತಿದ್ದೇವೆ. ಆದ್ದರಿಂದ ಪ್ರತಿಯೊಬ್ಬರೂ ಕುಡಿಯುವ ನೀರಿನ ಶುದ್ಧತೆಯನ್ನು ಗಮನಿಸಬೇಕು ಎಂದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ನಮ್ಮ ಗ್ರಾಮಕ್ಕೆ ದೇವಸ್ಥಾನದ ಜೀರ್ಣೋದಾರಕ್ಕೆ ಮತ್ತು ಹಾಲು ಉತ್ಪಾದಕರ ಸಂಘಕ್ಕೆ ಸಹಾಯಧನ ನೀಡಿದೆ ಎಂದರು.

ADVERTISEMENT

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ವಿ ಭಾಸ್ಕರ್ ಮಾತನಾಡಿ, ಫ್ಲೋರೈಡ್ ನೀರಿನಿಂದಾಗುತ್ತಿರುವ ಸಮಸ್ಯೆಯನ್ನು ಕೇಳಿ ತಿಳಿದುಕೊಂಡ ವೀರೇಂದ್ರ ಹೆಗ್ಗಡೆ ಅವರು ಶುದ್ಧಗಂಗಾ ಎಂಬ ಹೆಸರಿನಲ್ಲಿ ಇದುವರೆಗೆ 581 ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಿದ್ದಾರೆ. ಪ್ರತಿ ಲೀಟರ್‌ಗೆ 0.15 ಪೈಸೆ ಯಿಂದ 0.25 ಪೈಸೆ ಆಗುತ್ತದೆ. ಇದೇ ಗ್ರಾಮದದಲ್ಲಿ ಇರುವ ಶುದ್ಧನೀರು ಘಟಕದ ನೀರನ್ನು ಹೆಚ್ಚು ಹೆಚ್ಚು ಬಳಕೆ ಮಾಡಿಕೊಳ್ಳುವಂತೆ ತಿಳಿಸಿದರು.

ಸಮುದಾಯ ಆರೋಗ್ಯ ಅಧಿಕಾರಿ ಶಿಲ್ಪಾ ಮಾತನಾಡಿ, ಶುದ್ಧ ನೀರು ಕುಡಿದರೆ ದೇಹದಲ್ಲಿರುವ ವಿಷ ಅಂಶ, ಮಲದ ಮೂಲಕ ಹೊರ ಹೋಗುತ್ತದೆ. ಆಯಾಸ ಕಡಿಮೆಯಾಗುತ್ತದೆ, ಮಕ್ಕಳ ಬುದ್ಧಿ ಶಕ್ತಿ ಹೆಚ್ಚಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೃಷಿ ಮೇಲ್ವಿಚಾರಕ ಬಿ.ಜೆ. ರಾಜು, ಶುದ್ಧ ಗಂಗಾ ಘಟಕದ ಮೇಲ್ವಿಚಾರಕ ರೇವಣ್ಣ ಸಿದ್ದೇಶ, ಚಿಕ್ಕಕೆರೆಯೂರು ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಚಲುವರಾಜು, ಗ್ರಾಮದ ಗುಡಿಗೌಡ ಚಂದ್ರೇಗೌಡ, ರವಿ.ಸಿ.ಎನ್, ಶಾಲೆಯ ಮುಖ್ಯ ಶಿಕ್ಷಕಿ ರೂಪ, ಸೇವಾಪ್ರತಿನಿಧಿ ಸ್ನೇಹ, ಮಹೇಶ್, ವೆಂಕಟೇಶ್, ಶಿವರಾಮೇಗೌಡ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.