ಬರೋಡ ಕ್ರಿಕೆಟ್ ಸಂಸ್ಥೆ ಪರ ನಾಲ್ಕು ವಿಕೆಟ್ ಪಡೆದ ರಸಿಕ್ ದಾರ್
–ಪ್ರಜಾವಾಣಿ ಚಿತ್ರ/ಅನೂಪ್ ರಾಘ.ಟಿ.
ಮೈಸೂರು: ಆಲ್‌ರೌಂಡರ್ ಮೊನಿಷ್ ರೆಡ್ಡಿ (59 ಔಟಾಗದೇ; 54ಎ) ಅವರ ಅರ್ಧಶತಕ ಹೊಡೆದು ಕ್ಯಾ.ಕೆ.ತಿಮ್ಮಪ್ಪಯ್ಯ ಸ್ಮಾರಕ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಕರ್ನಾಟಕ ಕೋಲ್ಟ್ಸ್ ತಂಡಕ್ಕೆ ಸೋಮವಾರ ಬರೋಡ ಕ್ರಿಕೆಟ್ ಸಂಸ್ಥೆ ಎದುರು ಆಸರೆಯಾದರು.
ಎಸ್‌ಡಿಎನ್‌ಆರ್‌ಡಬ್ಲ್ಯು ಕ್ರೀಡಾಂಗಣದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಕೋಲ್ಟ್ಸ್ 184 ರನ್ ಗಳಿಸಿತು. ಒಂದು ಹಂತದಲ್ಲಿ 83 ರನ್‌ಗೆ 8 ವಿಕೆಟ್ ಕಳೆದುಕೊಂಡಿದ್ದ ತಂಡಕ್ಕೆ 9 ವಿಕೆಟ್‌ಗೆ ಮೊನಿಷ್ ರೆಡ್ಡಿ ಹಾಗೂ ಎಲ್.ಆರ್. ಕುಮಾರ್ ಆಸರೆ ಆದರು. ಈ ಜೋಡಿಯು 93 ರನ್ ಜೊತೆಯಾಟದ ಮೂಲಕ ತಂಡವನ್ನು ಸಂಕಷ್ಟದಿಂದ ಪಾರು ಮಾಡಿತು. ಬರೋಡ ಪರ ರಸಿಕ್ ದಾರ್ 4 ವಿಕೆಟ್ ಪಡೆದರು.
ಬರೋಡ ಸಹ ರನ್ ಗಳಿಸಲು ತಿಣುಕಾಡಿತು. ದಿನದಂತ್ಯಕ್ಕೆ 6 ವಿಕೆಟ್ ನಷ್ಟಕ್ಕೆ 129 ರನ್ ಗಳಿಸಿದ್ದು, ವಿಷ್ಣು ಸೋಲಂಕಿ (44) ಏಕಾಂಗಿ ಹೋರಾಟ ಪ್ರದರ್ಶಿಸಿದರು. ಶಿಖರ್ ಶೆಟ್ಟಿ (38ಕ್ಕೆ 4) ಪರಿಣಾಮಕಾರಿ ಎನಿಸಿದರು
ಸಂಕ್ಷಿಪ್ತ ಸ್ಕೋರ್
ಎಸ್‌ಡಿಎನ್‌ಆರ್‌ಡಬ್ಲ್ಯು ಕ್ರೀಡಾಂಗಣ
ಕೆಎಸ್‌ಸಿಎ ಕೋಲ್ಟ್ಸ್: 47.3 ಓವರ್‌ಗಳಲ್ಲಿ 184 (ಮೊನಿಷ್ ರೆಡ್ಡಿ ಔಟಾಗದೇ 59, ಎಲ್.ಆರ್. ಕುಮಾರ್ 36, ಪ್ರಖರ್ ಚತುರ್ವೇದಿ 33; ರಸಿಕ್ ದಾರ್ 35ಕ್ಕೆ 4, ಭಾರ್ಗವ್ ಭಟ್ 44ಕ್ಕೆ3); ಬರೋಡ ಕ್ರಿಕೆಟ್ ಸಂಸ್ಥೆ: 40 ಓವರ್‌ಗಳಲ್ಲಿ 6 ವಿಕೆಟ್‌ಗೆ 129 (ವಿಷ್ಣು ಸೋಲಂಕಿ ಔಟಾಗದೇ 44; ಶಿಖರ್ ಶೆಟ್ಟಿ 38ಕ್ಕೆ4).
ಎಸ್‌ಜೆಸಿಇ ಕ್ರೀಡಾಂಗಣ, ಮೈಸೂರು
ಆಂಧ್ರ ಕ್ರಿಕೆಟ್ ಸಂಸ್ಥೆ: 23.2 ಓವರ್‌ಗಳಲ್ಲಿ 87 (ನವೀನ್ ಕನ್ವರ್ 18ಕ್ಕೆ 4, ದಿವೇಶ್ ಶರ್ಮ 24ಕ್ಕೆ4).
ಹಿಮಾಚಲ ಪ್ರದೇಶ ಕ್ರಿಕೆಟ್ ಸಂಸ್ಥೆ: 61 ಓವರ್‌ಗಳಲ್ಲಿ 4ಕ್ಕೆ 232 (ಏಕಾಂತ್ ಸೇನ್ ಔಟಾಗದೇ 76, ಸಿದ್ಧಾಂತ್ ಪುರೋಹಿತ್ 50)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.