ADVERTISEMENT

ಕೆಎಸ್‌ಒಯು ವಾರ್ಷಿಕ ಘಟಿಕೋತ್ಸವ ಜ.31ರಂದು: 41,206 ಅಭ್ಯರ್ಥಿಗಳಿಗೆ ವಿವಿಧ ಪದವಿ

​ಪ್ರಜಾವಾಣಿ ವಾರ್ತೆ
Published 30 ಜನವರಿ 2026, 13:07 IST
Last Updated 30 ಜನವರಿ 2026, 13:07 IST
<div class="paragraphs"><p>ಘಟಿಕೋತ್ಸವ</p></div>

ಘಟಿಕೋತ್ಸವ

   

ಮೈಸೂರು: ಇಲ್ಲಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ವಾರ್ಷಿಕ ಘಟಿಕೋತ್ಸವ ಜ.31ರಂದು ಬೆಳಿಗ್ಗೆ 11.30ಕ್ಕೆ ನಡೆಯಲಿದ್ದು, ಒಟ್ಟು 41,206 ಅಭ್ಯರ್ಥಿಗಳಿಗೆ ವಿವಿಧ ಪದವಿ ಪ್ರದಾನ ಮಾಡಲಾಗುವುದು.

‘ವಿ.ವಿಯ ಘಟಿಕೋತ್ಸವ ಭವನದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದ್ದು, ರಾಜ್ಯಪಾಲ ಥಾವರಚಂದ್ ಗೆಹಲೋತ್‌ ಅಧ್ಯಕ್ಷತೆ ವಹಿಸುವರು. ಕೇಂದ್ರ ಶಿಕ್ಷಣ ಮತ್ತು ಈಶಾನ್ಯ ಪ್ರದೇಶದ ಅಭಿವೃದ್ಧಿ ಖಾತೆ ರಾಜ್ಯ ಸಚಿವ ಸುಕಾಂತ ಮಜುಂದಾರ್‌ ಘಟಿಕೋತ್ಸವ ಭಾಷಣ ಮಾಡುವರು. ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್‌ ಪಾಲ್ಗೊಳ್ಳುವರು’ ಎಂದು ಕುಲಪತಿ ಪ್ರೊ.ಶರಣಪ್ಪ ವಿ.ಹಲಸೆ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ADVERTISEMENT

‘2021–22ನೇ ಜನವರಿ ಆವೃತ್ತಿಯಿಂದ 2023–24ರ ಜನವರಿ ಆವೃತ್ತಿಯ 10,623 ಹಾಗೂ 2013–14 ಮತ್ತು 2014–15ನೇ ಶೈಕ್ಷಣಿಕ ಸಾಲಿನ ಸ್ನಾತಕ ಹಾಗೂ ಸ್ನಾತಕೋತ್ತರ ಕಾರ್ಯಕ್ರಮಗಳ ಒಟ್ಟು 30,515 ಮಂದಿಗೆ ಪದವಿ ಪ್ರದಾನ ಮಾಡಲಾಗುತ್ತಿದೆ’ ಎಂದರು.

‘2021–22ನೇ ಜನವರಿ ಆವೃತ್ತಿಯಿಂದ 2023–24ರ ಜನವರಿ ಆವೃತ್ತಿಯವರೆಗೆ 14,069 ಮಂದಿ ಪರೀಕ್ಷೆಗೆ ಹಾಜರಾಗಿದ್ದರು. ಈ ಪೈಕಿ 10,623 ಮಂದಿ ತೇರ್ಗಡೆಯಾಗಿದ್ದು, ಶೇ 75.50ರಷ್ಟು ಫಲಿತಾಂಶ ಬಂದಿದೆ. ಇವರಲ್ಲಿ 3,987 ಪುರುಷರು ಹಾಗೂ 6,704 ಮಹಿಳೆಯರು. ಘಟಿಕೋತ್ಸವದಲ್ಲಿ ಒಟ್ಟು 8 ಗಣ್ಯರಿಗೆ ಗೌರವ ಡಾಕ್ಟರೇಟ್‌ ಪ್ರದಾನ ಮಾಡಲಾಗುವುದು. 65 ಚಿನ್ನದ ಪದಕ, 62 ನಗದು ಬಹುಮಾನಗಳನ್ನು ವಿತರಿಸಲಾಗುವುದು. 78 ವರ್ಷ ವಯಸ್ಸಿನ ಲಕ್ಷ್ಮಿನಾರಾಯಣ ಎನ್ನುವವರು ಎಂಎ ಸಂಸ್ಕೃತ ಪದವಿ ಸ್ವೀಕರಿಸುತ್ತಿರುವುದು ವಿಶೇಷ’ ಎಂದು ಮಾಹಿತಿ ನೀಡಿದರು.

‘2013–14 ಮತ್ತು 2014–15ನೇ ಶೈಕ್ಷಣಿಕ ಸಾಲಿನ ಸ್ನಾತಕ ಹಾಗೂ ಸ್ನಾತಕೋತ್ತರ ಕಾರ್ಯಕ್ರಮಗಳಿಗೆ ಒಟ್ಟು 64,102 ಮಂದಿ ಪರೀಕ್ಷೆ ತೆಗೆದುಕೊಂಡಿದ್ದರು. ಅವರಲ್ಲಿ 30,515 ಮಂದಿ ಉತ್ತೀರ್ಣರಾಗಿದ್ದು, ಶೇ 47.60ರಷ್ಟು ಫಲಿತಾಂಶ ಬಂದಿದೆ’ ಎಂದು ತಿಳಿಸಿದರು.

‘ಪದವಿ ಪಡೆದವರ ಪೈಕಿ ಮಹಿಳೆಯರೇ ಮೇಲುಗೈ ಸಾಧಿಸಿದ್ದಾರೆ. ಯುಜಿಸಿ ಮಾನ್ಯತೆ ಸಿಗದಿದ್ದ ಕಾರಣದಿಂದ 2013–14 ಮತ್ತು 2014–15ನೇ ಶೈಕ್ಷಣಿಕ ಸಾಲಿನ ಸ್ನಾತಕ ಹಾಗೂ ಸ್ನಾತಕೋತ್ತರ ಕಾರ್ಯಕ್ರಮಗಳ ಅಭ್ಯರ್ಥಿಗಳಿಗೆ ಪದವಿ ಪ್ರದಾನ ಮಾಡಿರಲಿಲ್ಲ. ಅವರಿಗೆ ಈ ಬಾರಿಯ ಘಟಿಕೋತ್ಸವದಲ್ಲಿ ಪದವಿ ಪ್ರದಾನ ಮಾಡಲಾಗುತ್ತಿದೆ. ನೋಂದಣಿಯಾದವರಲ್ಲಿ ಪರೀಕ್ಷೆಗೆ ಹಾಜರಾದವನ್ನು ಮಾತ್ರ ಪರಿಗಣಿಸಲಾಗಿದೆ’ ಎಂದು ಹೇಳಿದರು.

ಕುಲಸಚಿವರಾದ ಸಿ.ಎಸ್.ಆನಂದ್ ಕುಮಾರ್, ಪ್ರೊ.ನವೀನ್‌ಕುಮಾರ್.ಎಸ್.ಕೆ., ಡೀನ್ ರಾಮನಾಥಂನಾಯ್ಡು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.