ಕೆಎಸ್‌ಒಯು ಲಾಂಛನ
ಮೈಸೂರು: ಇಲ್ಲಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ 21ನೇ ವಾರ್ಷಿಕ ಘಟಿಕೋತ್ಸವವನ್ನು ಜನವರಿ ಕೊನೆಯ ವಾರದಲ್ಲಿ ನಡೆಸಲು ತೀರ್ಮಾನಿಸಲಾಗಿದೆ.
2013-14, 2014-15ನೇ ಶೈಕ್ಷಣಿಕ ಸಾಲಿನಲ್ಲಿ ಪ್ರವೇಶಾತಿ ಪಡೆದು, ಪದವಿ ಪೂರ್ಣಗೊಳಿಸಿರುವ ಇನ್‌ಹೌಸ್ ಕಾರ್ಯಕ್ರಮಗಳ ವಿದ್ಯಾರ್ಥಿಗಳು ಪದವಿ ಪ್ರಮಾಣಪತ್ರಗಳನ್ನು ಪಡೆಯಲು ಅರ್ಹರಾಗಿದ್ದಾರೆ.
2013-14ನೆ ಶೈಕ್ಷಣಿಕ ಸಾಲಿನಲ್ಲಿ ಪ್ರವೇಶಾತಿ ಪಡೆದು ಉತ್ತೀರ್ಣಗೊಂಡಿರುವ (ಏಪ್ರಿಲ್/ಮೇ 2024ರವರೆಗೆ) ಬಿ.ಎ, ಬಿ.ಕಾಂ, ಬಿ.ಲಿಬ್.ಐ.ಎಸ್ಸಿ, ಬಿ.ಇಡಿ ಮತ್ತು ಬಿ.ಇಡಿ ವಿಶೇಷ ಮತ್ತು ಸರ್ಟಿಫಿಕೆಟ್ ಕಾರ್ಯಕ್ರಮಗಳ ಸ್ನಾತಕ ಪದವಿಯ ವಿದ್ಯಾರ್ಥಿಗಳು, 2013-14ನೇ ಶೈಕ್ಷಣಿಕ ಸಾಲಿನಲ್ಲಿ ಪ್ರವೇಶಾತಿ ಪಡೆದು ತೇರ್ಗಡೆ ಆಗಿರುವ (ಏಪ್ರಿಲ್/ಮೇ 2024ರವರೆಗೆ) ಎಲ್ಲಾ ಎಂ.ಎ, ಎಂ.ಕಾಂ, ಎಂ.ಬಿ.ಎ, ಎಂ.ಇಡಿ ಎಲ್ಲಾ ಎಂ.ಎಸ್ಸಿ, ಎಂ.ಲಿಬ್.ಐ.ಎಸ್ಸಿ, ಎಲ್.ಎಲ್.ಎಂ, ಎಂ.ಟಿ.ಎಂ. ಮತ್ತು ಪಿ.ಜಿ ಡಿಪ್ಲೊಮಾ ಕಾರ್ಯಕ್ರಮಗಳ ಸ್ನಾತಕೋತ್ತರ ವಿದ್ಯಾರ್ಥಿಗಳು ಪ‍್ರಮಾಣಪತ್ರ ಪಡೆಯಬಹುದು.
2014-15ನೇ ಶೈಕ್ಷಣಿಕ ಸಾಲಿನಲ್ಲಿ ಪ್ರವೇಶಾತಿ ಪಡೆದು ಉತ್ತೀರ್ಣಗೊಂಡಿರುವ (ಏಪ್ರಿಲ್/ಮೇ 2024ರವರೆಗೆ) ಬಿ.ಎ, ಬಿ.ಕಾಂ, ಬಿ.ಲಿಬ್.ಐ.ಎಸ್ಸಿ, ಬಿ.ಇಡಿ ಮತ್ತು ಬಿ.ಇಡಿ ವಿಶೇಷ ಮತ್ತು ಸರ್ಟಿಫಿಕೇಟ್ ಕಾರ್ಯಕ್ರಮಗಳ ಸ್ನಾತಕ ಪದವಿಯ ವಿದ್ಯಾರ್ಥಿಗಳು, 2014-15ನೇ ಶೈಕ್ಷಣಿಕ ಸಾಲಿನಲ್ಲಿ ಪ್ರವೇಶಾತಿ ಪಡೆದು ಉತ್ತೀರ್ಣರಾಗಿರುವ ಎಲ್ಲಾ ಎಂ.ಎ, ಎಂ.ಕಾಂ, ಎಂ.ಬಿ.ಎ. ಎಂ.ಇಡಿ ಎಲ್ಲಾ ಎಂ.ಎಸ್ಸಿ, ಎಂ.ಲಿಬ್.ಐ.ಎಸ್ಸಿ, ಎಲ್.ಎಲ್.ಎಂ. ಎಂ.ಟಿ.ಎಂ ಮತ್ತು ಪಿ.ಜಿ ಡಿಪ್ಲೊಮಾ ಕಾರ್ಯಕ್ರಮಗಳ ಸ್ನಾತಕೋತ್ತರ ವಿದ್ಯಾರ್ಥಿಗಳು ಅರ್ಹರಿರುತ್ತಾರೆ.
ಚಿನ್ನದ ಪದಕ ಮತ್ತು ನಗದು ಬಹುಮಾನ ಪಡೆದಿರುವ ವಿದ್ಯಾರ್ಥಿಗಳಿಗೆ ಮಾತ್ರವೇ ವೇದಿಕೆಗೆ ಪ್ರವೇಶ ನೀಡಲಾಗುವುದು. ಪದಕ ಮತ್ತು ನಗದು ಬಹುಮಾನಕ್ಕೆ ಅರ್ಹರಾದ ಸ್ನಾತಕ ಮತ್ತು ಸ್ನಾತಕೋತ್ತರ ಕಾರ್ಯಕ್ರಮದ ಅಭ್ಯರ್ಥಿಗಳು, ಪಿ.ಎಚ್‌ಡಿ ಪದವೀಧರರು ಪಾಲ್ಗೊಳ್ಳಬಹುದು.
ಹೆಚ್ಚಿನ ಮಾಹಿತಿಗೆ ನಿಗದಿತ ಅರ್ಜಿ ನಮೂನೆಯ ಅರ್ಜಿಯನ್ನು ವಿಶ್ವವಿದ್ಯಾಲಯದ ಅಧಿಕೃತ ಜಾಲತಾಣದಲ್ಲಿ (www.ksoumysuru.ac.in) ಪಡೆದು ಸಲ್ಲಿಸಿ, ಆನ್‌ಲೈನ್‌ನಲ್ಲೇ ಶುಲ್ಕ ಪಾವತಿಸಬೇಕು ಎಂದು ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.