ಹುಣಸೂರು: ಶ್ರೀನಗರದಲ್ಲಿ ಭಾರತೀಯ ಸೇನೆಯ ವಾಹನ ಅಪಘಾತಕ್ಕೀಡಾಗಿ ಹುತಾತ್ಮರಾದ ಕೊಡಗಿನ ಯೋಧ ದಿವಿನ್ (28) ಪಾರ್ಥಿವ ಶರೀರಕ್ಕೆ ಹುಣಸೂರಿನ ಲಾ ಸೆಲೆಟ್ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು ಅಂತಿಮ ನಮನ ಸಲ್ಲಿಸಿದರು.
ಬೆಂಗಳೂರಿನಿಂದ ಕೊಡಗಿಗೆ ತೆರಳುವ ಮಾರ್ಗ ಮಧ್ಯೆ ದೇವರಾಜ ಅರಸು ಪುತ್ಥಳಿ ಬಳಿ ಮಂಗಳವಾರ ರಾತ್ರಿ ಕಾಲೇಜು ವಿದ್ಯಾರ್ಥಿಗಳು ಯೋಧನ ಪಾರ್ಥಿವ ಶರೀರಕ್ಕೆ ಪುಷ್ಪನಮನ ಸಲ್ಲಿಸಿ ಗೌರವ ಅರ್ಪಿಸಿದರು.
ಕಾಲೇಜು ಪ್ರಾಂಶುಪಾಲ ರವಿ ವಿ. ದೀಪಕ್, ಮಧುಕರ್, ವಿದ್ಯಾರ್ಥಿ ಮುಖಂಡ ತೇಜಸ್ ಎಂ. ಗೌಡ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.