ADVERTISEMENT

ವೀರಪ್ಪನ್‌ ಪ್ರಕರಣದಲ್ಲಿ ಸರ್ಕಾರ ಪರ ವಾದ ಮಾಡಿದ್ದ ವಕೀಲ ಅಶ್ವಿನ್ ಜೋಶಿ ನಿಧನ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2025, 22:27 IST
Last Updated 2 ಅಕ್ಟೋಬರ್ 2025, 22:27 IST
ಅಶ್ವಿನ್ ಕುಮಾರ್ ಜೋಶಿ
ಅಶ್ವಿನ್ ಕುಮಾರ್ ಜೋಶಿ   

ಮೈಸೂರು: ದಂತಚೋರ ವೀರಪ್ಪನ್‌ ಪ್ರಕರಣದಲ್ಲಿ ಮೈಸೂರು ವಿಶೇಷ ನ್ಯಾಯಾಲಯದಲ್ಲಿ ಸರ್ಕಾರದ ಪರವಾಗಿ ವಾದಿಸಿದ್ದ, ಇಲ್ಲಿನ ಸರಸ್ವತಿಪುರಂ ನಿವಾಸಿ, ವಕೀಲ ಅಶ್ವಿನ್ ಕುಮಾರ್ ಜೋಶಿ (70) ಬುಧವಾರ ತಡರಾತ್ರಿ ತಮ್ಮ ಮನೆಯಲ್ಲಿ ನಿಧನರಾದರು. 

ನ್ಯಾಯಾಧೀಶರೂ ಆಗಿದ್ದ ಅವರು, ಆ ವೃತ್ತಿಯಲ್ಲಿ ಒಂದು ವರ್ಷ ಪೂರೈಸಿದ ಬಳಿಕ ರಾಜೀನಾಮೆ ನೀಡಿ ವಕೀಲಿ ವೃತ್ತಿಗೆ ವಾಪಸಾಗಿದ್ದರು. ಮೈಸೂರು ವಿಶ್ವವಿದ್ಯಾಲಯದ ಕಾನೂನು ಸಲಹೆಗಾರರಾಗಿಯೂ ಸೇವೆ ಸಲ್ಲಿಸಿದ್ದರು. 

ಅವರಿಗೆ ಪತ್ನಿ ಲಕ್ಷ್ಮಿ ಜೋಶಿ, ಪುತ್ರಿ ಡಾ. ತ್ರಿವೇಣಿ ಜೋಶಿ, ಪುತ್ರ ಕಲ್ಯಾಣ್ ರಾಮ್ ಜೋಶಿ ಇದ್ದಾರೆ. ಅಂತ್ಯಸಂಸ್ಕಾರವು ಗುರುವಾರ ಸಂಜೆ ಚಾಮುಂಡಿ ಬೆಟ್ಟದ ತಪ್ಪಲಿನ ಚಿತಾಗಾರದಲ್ಲಿ ನಡೆಯಿತು ಎಂದು ಕುಟುಂಬದ ಮೂಲಗಳು ತಿಳಿಸಿವೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.