
ಪ್ರಜಾವಾಣಿ ವಾರ್ತೆ
ಸರಗೂರು (ಮೈಸೂರು ಜಿಲ್ಲೆ): ನಂಜನಗೂಡು ತಾಲ್ಲೂಕಿನ ಯಡಯನಹಳ್ಳಿ ಬಳಿ ಕೂಂಬಿಂಗ್ ನಡೆಸುತ್ತಿದ್ದಾಗ ಚಿರತೆ ದಾಳಿ ನಡೆಸಿದ್ದು, ಸಿಬ್ಬಂದಿ ಓಂಕಾರ್‌ಗೆ ಗಾಯಗಳಾಗಿವೆ.
‘ಮೈಸೂರು ಜಿಲ್ಲೆಯ ವಿವಿಧ ಅರಣ್ಯದಂಚಿನ ಗ್ರಾಮದಲ್ಲಿ ತಂಡಗಳನ್ನು ರಚಿಸಿ ಕೊಂಬಿಂಗ್ ಮಾಡಲಾಗುತ್ತಿದೆ. ಯಡಯನಹಳ್ಳಿಯಲ್ಲಿ ಸಿಬ್ಬಂದಿ ಮೇಲೆ ಚಿರತೆ ಜಿಗಿದಿದ್ದು, ಜೊತೆಗಿದ್ದವರು ಕೂಗಾಡಿದಾಗ ಓಡಿ ಹೋಗಿದೆ. ಸಿಬ್ಬಂದಿ ತಲೆಯಲ್ಲಿ ರಕ್ತಸ್ರಾವವಾಗಿದ್ದು, ಆಸ್ಪತ್ರೆಗೆ ಕರೆದೊಯ್ಯಲಾಗಿದೆ’ ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.