ADVERTISEMENT

ಹನಗೋಡು: ಚಿರತೆ ದಾಳಿಗೆ ಹಸು ಬಲಿ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2020, 6:22 IST
Last Updated 9 ಅಕ್ಟೋಬರ್ 2020, 6:22 IST

ಹನಗೋಡು: ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಕಾಡಂಚಿನ ಕಿರಂಗೂರು ಗ್ರಾಮದ ಕೊಟ್ಟಿಗೆಗೆ ಬುಧವಾರ ರಾತ್ರಿ ನುಗ್ಗಿದ ಚಿರತೆ ಹಸುವೊಂದನ್ನು ಕೊಂದು ಹಾಕಿದೆ.

ಗ್ರಾಮದ ಚಿನ್ನಸ್ವಾಮಿ ತಮ್ಮ ಮನೆಯ ಕೊಟ್ಟಿಗೆಯಲ್ಲಿ ಹಸು ಕಟ್ಟಿದ್ದರು. ಅದು ರಾತ್ರಿ ಕಿರುಚಾಡಿದಾಗ ಎಚ್ಚರಗೊಂಡು ಹೋಗಿ ನೋಡಿ, ಕೂಗಾಡಿ ಪಕ್ಕದ ಮನೆಯವರನ್ನು ಸೇರಿಸುವಷ್ಟರಲ್ಲಿ ಚಿರತೆ ಹಸು ಕೊಂದು ಹೋಗಿದೆ. ಇದರಿಂದ ಮತ್ತೆ ಯಾವಾಗ ಚಿರತೆ ದಾಳಿ ಮಾಡುವುದೋ ಎಂಬ ಆತಂಕ ಗ್ರಾಮಸ್ಥರದ್ದಾಗಿದೆ.

₹ 50 ಸಾವಿರ ಬೆಲೆಯ ಹಸು ಹೋಯಿತು ಎಂದು ಚಿನ್ನಸ್ವಾಮಿ ತಿಳಿಸಿದರು.

ADVERTISEMENT

ಸ್ಥಳಕ್ಕೆ ಉಪವಲಯ ಅರಣ್ಯಾಧಿಕಾರಿ ದ್ವಾರಕನಾಥ್ ಮತ್ತು ಸಿಬ್ಬಂದಿ ಬಂದು ಪರಿಶೀಲನೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.