
ಪ್ರಜಾವಾಣಿ ವಾರ್ತೆ
ಹಂಪಾಪುರ: ಕಣಿಯನಹುಂಡಿ ಗ್ರಾಮದಲ್ಲಿನ ರಸ್ತೆಯಿಂದ ತೋಟಕ್ಕೆ ಚಿರತೆಯು ತೆರಳುತ್ತಿರುವ ದೃಶ್ಯವನ್ನು ಇದೇ ಮಾರ್ಗದಲ್ಲಿ ಚಲಿಸುತ್ತಿದ್ದ ಪ್ರಯಾಣಿಕರು ಮೊಬೈಲ್‌ನಲ್ಲಿ ವಿಡಿಯೊ ಮಾಡಿದ್ದು, ಸ್ಥಳೀಯರನ್ನು ಆತಂಕಕ್ಕೆ ದೂಡಿದೆ.
ಗ್ರಾಮದ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೃಷ್ಣ ಅವರ ಜಮೀನಿನ ಸಮೀಪ ತೆರಳುತ್ತಿದ್ದ ವೇಳೆ ಇದೇ ಮಾರ್ಗದಲ್ಲಿ ಕೋಳಿಮರಿಗಳನ್ನು ಸಾಗಿಸುತ್ತಿದ್ದ ಲಾರಿ ಚಾಲಕ ಮೊಬೈಲ್‌ನಲ್ಲಿ ವಿಡಿಯೊ ಮಾಡಿದ್ದಾರೆ. ಚಿರತೆಯು ಲಾರಿ ಸದ್ದಿಗೂ ಹೆದರದೇ ತೆರಳುತ್ತಿರುವುದು ಕಂಡುಬಂದಿದೆ.
ಗ್ರಾಮಸ್ಥರು ವಿಷಯ ಗಮನಕ್ಕೆ ಬರುತ್ತಿದ್ದಂತೆ ಅರಣ್ಯ ಇಲಾಖೆಗೆ ದೂರನ್ನು ನೀಡಿದ್ದಾರೆ.
ಕಣಿಯನಹುಂಡಿ ಗ್ರಾಮದ ಕೃಷ್ಣ ಮಾತನಾಡಿ, ‘ನಾವು ಶುಂಠಿ, ಬಾಳೆ, ಕಬ್ಬು ಸೇರಿದಂತೆ ಇತರೆ ಬೆಳೆಗಳಿಗೆ ನೀರನ್ನು ಬಿಡಲು ತೆರಳುವ ವೇಳೆ ಚಿರತೆ ಬಂದು ಹೋಗಿದೆ. ರಾತ್ರಿ ವೇಳೆ ಪಂಪಸೆಟ್ ವಿದ್ಯುತ್ ನೀಡುವುದರಿಂದ ರೈತರು ರಾತ್ರಿ ಸಂಚರಿಸುವ ಅನಿವಾರ್ಯತೆ ಇದೆ, ಆದ್ದರಿಂದ ಸೆಸ್ಕ್‌ನವರು ವಿದ್ಯುತ್ ಅನ್ನು ಬೆಳಿಗ್ಗೆ ನೀಡಬೇಕು’ ಎಂದು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.