ADVERTISEMENT

ಬಡವರ ಬೆನ್ನೆಲುಬಾಗಿ ಲಯನ್ಸ್‌ ಕ್ಲಬ್‌

​ಪ್ರಜಾವಾಣಿ ವಾರ್ತೆ
Published 20 ಜುಲೈ 2019, 14:54 IST
Last Updated 20 ಜುಲೈ 2019, 14:54 IST
ತಿಲಕ್‌ ನಗರದ ಲಯನ್ಸ್‌ ಕ್ಲಬ್‌ ಆಫ್‌ ಮೈಸೂರಿನಲ್ಲಿ ಈಚೆಗೆ ನಡೆದ ಲಯನ್ಸ್‌ ಕ್ಲಬ್‌ನ ಸಂಚಿಕೆ ಬಿಡುಗಡೆ ಮತ್ತು ಪದಗ್ರಹಣ ಕಾರ್ಯಕ್ರಮದಲ್ಲಿ ಕ್ಲಬ್‌ನ ಸದಸ್ಯರು ಹಾಗೂ ಪದಾಧಿಕಾರಿಗಳು
ತಿಲಕ್‌ ನಗರದ ಲಯನ್ಸ್‌ ಕ್ಲಬ್‌ ಆಫ್‌ ಮೈಸೂರಿನಲ್ಲಿ ಈಚೆಗೆ ನಡೆದ ಲಯನ್ಸ್‌ ಕ್ಲಬ್‌ನ ಸಂಚಿಕೆ ಬಿಡುಗಡೆ ಮತ್ತು ಪದಗ್ರಹಣ ಕಾರ್ಯಕ್ರಮದಲ್ಲಿ ಕ್ಲಬ್‌ನ ಸದಸ್ಯರು ಹಾಗೂ ಪದಾಧಿಕಾರಿಗಳು   

ಮೈಸೂರು: ‘ಸಮಾಜದಲ್ಲಿನ ಬಡವರ ಕಷ್ಟಗಳಿಗೆ ಸ್ಪಂದಿಸಿ, ಅವರ ಶಿಕ್ಷಣ ಮತ್ತು ಆರೋಗ್ಯಕ್ಕೆ ಪೂರಕವಾದ ಅನೇಕ ಶಿಬಿರಗಳನ್ನು ಏರ್ಪಡಿಸುವ ಮೂಲಕ ಲಯನ್ಸ್‌ ಕ್ಲಬ್‌ ಬಡವರ ಬೆನ್ನೆಲುಬಾಗಿ ಕಾರ್ಯ ನಿರ್ವಹಿಸುತ್ತಿದೆ’ ಎಂದು ವಿ.ರೇಣುಕುಮಾರ್‌ ಹೇಳಿದರು.

ಇಲ್ಲಿನ ತಿಲಕ್‌ ನಗರದ ಲಯನ್ಸ್‌ ಕ್ಲಬ್‌ ಆಫ್‌ ಮೈಸೂರಿನಲ್ಲಿ ಈಚೆಗೆ ನಡೆದ ಲಯನ್ಸ್‌ ಕ್ಲಬ್‌ನ ಸಂಚಿಕೆ ಬಿಡುಗಡೆ ಮತ್ತು ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಸಮಾಜಕ್ಕೆ ಅರ್ಥಪೂರ್ಣವಾದಂತಹ ಕೆಲಸ ಮಾಡುವ ಮೂಲಕ, ಲಯನ್ಸ್ ಕ್ಲಬ್‌ ವಿಶ್ವದಲ್ಲೇ ವಿಶೇಷವಾಗಿ ಗುರುತಿಸಲ್ಪಟಿದೆ’ ಎಂದರು.

ಅಂತರರಾಷ್ಟ್ರೀಯ ಲಯನ್ಸ್‌ ಸಂಸ್ಥೆ 317ಎನ ಗವರ್ನರ್‌ ನಾಗರಾಜ್‌ ವಿ.ಬೇರಿ ನಮ್ಮ ಮೈಸೂರಿನವರೇ ಆಗಿದ್ದು, ಅವರ ಮಾರ್ಗದರ್ಶನದಲ್ಲಿ ಸದಸ್ಯರ ಸಲಹೆ, ಸಹಕಾರ ಪಡೆದು ಹೆಚ್ಚಿನ ಸೇವಾ ಕಾರ್ಯ ಕೈಗೊಳ್ಳುತ್ತೇನೆ ಎಂದು ನೂತನ ಅಧ್ಯಕ್ಷರಾಗಿ ಪದಗ್ರಹಣ ಮಾಡಿದ ಮರಿಶೆಟ್ಟಿ ತಿಳಿಸಿದರು.

ADVERTISEMENT

ಡಾ.ಪ್ರಭಾಮಂಡಲ್‌ ಪ್ರಸಕ್ತ ಸಾಲಿನ ಕ್ಲಬ್ಬಿನ ಡೈರೆಕ್ಟರಿ (ಸಂಚಿಕೆ) ಬಿಡುಗಡೆ ಮಾಡಿದರು. ಕ್ಲಬ್‌ನ ಪದಾಧಿಕಾರಿಗಳಾದ ಪ್ರತಿಮಾ ರಮೇಶ್‌, ಎಸ್‌.ಸಿದ್ದರಾಜು, ಕೆ.ಎಸ್‌.ಕೃಷ್ಣಮೂರ್ತಿ, ಮೋಹನ್‌, ಪಿ.ಎಸ್‌.ಚಂದ್ರಶೇಖರ, ಚಾಮರಾಜ್‌, ಶಿವಕುಮಾರ್‌, ಉಮಾಪತಿ, ಕೃಷ್ಣೋಜಿರಾವ್‌ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.