ADVERTISEMENT

ಮೈಸೂರು | ಹಣ ಹೂಡಿಕೆಗೆ ಆಮಿಷ; ₹1.25 ಲಕ್ಷ ವಂಚನೆ

​ಪ್ರಜಾವಾಣಿ ವಾರ್ತೆ
Published 11 ಜನವರಿ 2024, 16:42 IST
Last Updated 11 ಜನವರಿ 2024, 16:42 IST
ವಂಚನೆ
ವಂಚನೆ   

ಸಾಂದರ್ಭಿಕ ಚಿತ್ರ

ಮೈಸೂರು: ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ನೀಡುವುದಾಗಿ ನಕಲಿ ಕಂಪನಿಯೊಂದು ನಂಬಿಸಿ ನಾಚನಹಳ್ಳಿಪಾಳ್ಯ ನಿವಾಸಿ ಇಸ್ಲಾಂ ಪಾಷ ಅವರಿಂದ ₹1.25 ಲಕ್ಷ ಪಡೆದು ವಂಚಿಸಿದೆ.

ಪಾಷಾ ಆನ್‌ಲೈನ್ ಮೂಲಕ ನಕಲಿ ಕಂಪನಿಯೊಂದರಲ್ಲಿ ಕೆಲಸಕ್ಕೆ ಸೇರಿದ್ದರು. ಮೊದಲು ಅವರಿಗೆ ಸ್ವಲ್ಪ ವೇತನವೂ ಪಾವತಿಯಾಗಿತ್ತು. ನಂತರ ನೀವು ಕಂಪನಿಯಲ್ಲಿ ಹಣ ಹೂಡಿದರೆ ಹೆಚ್ಚಿನ ಲಾಭ ಪಡೆಯಬಹುದು ಎಂದು ಆಮಿಷ ಒಡ್ಡಿದ್ದು, ಇದನ್ನು ನಂಬಿದ ಪಾಷ ಅವರು ಹಂತ ಹಂತವಾಗಿ ₹1.25 ಲಕ್ಷವನ್ನು ಅವರ ಖಾತೆಗೆ ಹಾಕಿದ್ದಾರೆ. ನಂತರ ಅವರಿಂದ ಯಾವುದೇ ಉತ್ತರ ಬರದೆ, ಸಂಪರ್ಕಕ್ಕೂ ಸಿಕ್ಕಿಲ್ಲ. ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.