ಮೈಸೂರು: ಇಲ್ಲಿನ ಕುವೆಂಪುನಗರದ ಎಂಎಎಸ್‌ವಿಎಸ್ ಗುರುಕುಲ ಕಾಲೇಜಿಗೆ 2024–25ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ 98.4 ಫಲಿತಾಂಶ ದೊರೆತಿದೆ.
ಪರೀಕ್ಷೆಗೆ ಹಾಜರಾದ ಒಟ್ಟು 245 ವಿದ್ಯಾರ್ಥಿಗಳಲ್ಲಿ 103 ವಿದ್ಯಾರ್ಥಿಗಳು ಅತ್ಯುತ್ತಮ ಶ್ರೇಣಿ, 130 ಪ್ರಥಮ ದರ್ಜೆ ಹಾಗೂ 8 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಎಸ್. ಪ್ರಣವ್ (590) ಕಾಲೇಜಿಗೆ ಪ್ರಥಮ ಸ್ಥಾನ ಗಳಿಸಿದ್ದಾರೆ. ಮದನ್ ಕುಮಾರ್ ಬಿ.ಸಿ (586) ಲಾಸ್ಯ ಆರ್. (586) ಹಾಗೂ ಬಿ.ಪೃಥ್ವಿರಾಜ್ (584) ಉತ್ತಮ ಸಾಧನೆ ತೋರಿದ್ದಾರೆ.
ಕನ್ನಡದಲ್ಲಿ 16, ಗಣಿತದಲ್ಲಿ 4, ರಸಾಯನಶಾಸ್ತ್ರ, ಜೀವಶಾಸ್ತ್ರದಲ್ಲಿ ತಲಾ 2 ಹಾಗೂ ಕಂಪ್ಯೂಟರ್ ವಿಜ್ಞಾನದಲ್ಲಿ 3 ವಿದ್ಯಾರ್ಥಿಗಳು ಪೂರ್ಣ ಅಂಕ ಪಡೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.