
ಮೈಸೂರು: ಮೈಸೂರು ವಿಶ್ವವಿದ್ಯಾಲಯದ ಭೌಗೋಳಿಕ ಮಾಹಿತಿ ತಂತ್ರಜ್ಞಾನ ಹಾಗೂ ಭೂಗೋಳಶಾಸ್ತ್ರ ಅಧ್ಯಯನ ವಿಭಾಗವು ರುಸಾ ಸಹಯೋಗದಲ್ಲಿ ‘ಭೂ-ಮಾಹಿತಿಶಾಸ್ತ್ರ ಮತ್ತು ಭೂ ಸಮೀಕ್ಷೆ’ ವಿಷಯದ ಕುರಿತು ಆಯೋಜಿಸಿರುವ ಕಾರ್ಯಾಗಾರವನ್ನು ಕುಲಸಚಿವೆ ಎಂ.ಕೆ.ಸವಿತಾ ಉದ್ಘಾಟಿಸಿದರು.
ಬಳಿಕ ಮಾತನಾಡಿ, ‘ಭೂ ಸಮೀಕ್ಷೆಯಲ್ಲಿ ಟೋಟಲ್ ಸ್ಟೇಷನ್, ಜಿಪಿಎಸ್ ಮತ್ತು ಡ್ರೋನ್ ಸರ್ವೆ ಮುಂತಾದ ಆಧುನಿಕ ತಂತ್ರಜ್ಞಾನಗಳನ್ನು ಬಳಸಲಾಗುತ್ತಿದ್ದು, ಇವು ಸಂಶೋಧನಾ ಕ್ಷೇತ್ರ ಹಾಗೂ ಆಡಳಿತಾತ್ಮಕ ಕಾರ್ಯದಲ್ಲಿ ತೊಡಗಿಸಿಕೊಂಡವರಿಗೆ ಸಹಾಯಕವಾಗಿವೆ’ ಎಂದು ತಿಳಿಸಿದರು.
ಅಟ್ಲಾಷೈನ್ ಕಂಪನಿಯ ನಿರ್ದೇಶಕ ಡಾ. ಸುರೇಶ್ ಚಿತ್ರಾಪು ಮಾತನಾಡಿದರು.
ವಿಭಾಗದ ಸಂಯೋಜಕಿ ಪ್ರೊ. ಜಯಶ್ರೀ, ಸಂದರ್ಶಕ ಪ್ರಾಧ್ಯಾಪಕರಾದ ಪ್ರೊ. ರಾಮು, ವಿಭಾಗದ ಅಧ್ಯಕ್ಷ ಪ್ರೊ. ಚಂದ್ರಶೇಖರ, ರೇಖಾ, ಪಾಪಣ್ಣ, ರಮ್ಯಾ, ಕೃತಿಕಾ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.