ADVERTISEMENT

ವಸ್ತು ಸಂಗ್ರಹಾಲಯ ದಿನಾಚರಣೆ: ಸಾಂಸ್ಕೃತಿಕ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 18 ಮೇ 2025, 14:25 IST
Last Updated 18 ಮೇ 2025, 14:25 IST
ಮೈಸೂರಿನ ಎಎಸ್‌ಐ ಕಚೇರಿಯಲ್ಲಿ ಭಾನುವಾರ ಅಂತರರಾಷ್ಟ್ರೀಯ ವಸ್ತು ಸಂಗ್ರಹಾಲಯ ದಿನಾಚರಣೆಯನ್ನು ಉದ್ಘಾಟಿಸಲಾಯಿತು. ಟಿ.ಯೋಗೇಶ್‌, ಹರ್ಷವರ್ಧನ್, ಟಿ.ಯೋಗೇಶ್, ಕೆ.ವಿ.ಕೃಷ್ಣಮೂರ್ತಿ, ಬನಿತಾ ಬಿಹಾರ ಪಾಲ್ಗೊಂಡರು
ಮೈಸೂರಿನ ಎಎಸ್‌ಐ ಕಚೇರಿಯಲ್ಲಿ ಭಾನುವಾರ ಅಂತರರಾಷ್ಟ್ರೀಯ ವಸ್ತು ಸಂಗ್ರಹಾಲಯ ದಿನಾಚರಣೆಯನ್ನು ಉದ್ಘಾಟಿಸಲಾಯಿತು. ಟಿ.ಯೋಗೇಶ್‌, ಹರ್ಷವರ್ಧನ್, ಟಿ.ಯೋಗೇಶ್, ಕೆ.ವಿ.ಕೃಷ್ಣಮೂರ್ತಿ, ಬನಿತಾ ಬಿಹಾರ ಪಾಲ್ಗೊಂಡರು   

ಮೈಸೂರು: ಭಾರತೀಯ ಮಾನವಶಾಸ್ತ್ರ ಸಮೀಕ್ಷೆ (ಎಎಸ್‌ಐ) ಹಾಗೂ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯಿಂದ ಇಲ್ಲಿನ ಎಎಸ್‌ಐ ಕಚೇರಿಯಲ್ಲಿ ಭಾನುವಾರ ಅಂತರರಾಷ್ಟ್ರೀಯ ವಸ್ತು ಸಂಗ್ರಹಾಲಯ ದಿನಾಚರಣೆ ನಡೆಯಿತು.

‘ವೇಗವಾಗಿ ಬದಲಾಗುತ್ತಿರುವ ಸಮುದಾಯಗಳಲ್ಲಿ ವಸ್ತು ಸಂಗ್ರಹಾಲಯಗಳ ಭವಿಷ್ಯ’ ಎಂಬ ಧ್ಯೇಯ ವಾಕ್ಯದೊಂದಿಗೆ ನಡೆದ ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಬುಡಕಟ್ಟು ಸಮುದಾಯಗಳ ಸಾಧಕರ ಯಶಸ್ಸಿನ ಚಿತ್ರಣ ಹಾಗೂ ಸಾಂಸ್ಕೃತಿಕ ಪ್ರದರ್ಶನಗಳು ನಡೆದವು.

ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯ ಪ್ರಭಾರ ನಿರ್ದೇಶಕ ಟಿ.ಯೋಗೇಶ್‌ ಮಾತನಾಡಿ, ‘ಎಎಸ್‌ಐ ಮತ್ತು ಬುಡಕಟ್ಟು ಸಂಶೋಧನಾ ಸಂಸ್ಥೆಯು ರಾಜ್ಯದ ಬುಡಕಟ್ಟುಗಳು, ಆದಿವಾಸಿಗಳು ಹಾಗೂ ಇತರೆ ಸಮುದಾಯಗಳ ಸರ್ವತೋಮುಖ ಅಭಿವೃದ್ಧಿಗೆ ನಿರಂತರವಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ’ ಎಂದು ಮಾಹಿತಿ ನೀಡಿದರು.

ADVERTISEMENT

ಎಎಸ್‌ಐ ಉಪನಿರ್ದೇಶಕ ಹರ್ಷವರ್ಧನ್, ಮೂಲ ಆದಿವಾಸಿಗಳ ಅಧ್ಯಯನ ಕೇಂದ್ರ ಸಂಶೋಧನಾಧಿಕಾರಿ ಕೆ.ವಿ.ಕೃಷ್ಣಮೂರ್ತಿ, ಎಎಸ್‌ಐ ಚೀಫ್‌ ಮ್ಯೂಸಿಯಂ ಕ್ಯುರೇಟರ್ ಬನಿತಾ ಬಿಹಾರ, ಅರಣ್ಯಾಧಾರಿತ ಬುಡಕಟ್ಟು ಸಮುದಾಯಗಳ ಮುಖಂಡರಾದ ಚಿಕ್ಕಬೊಮ್ಮ, ಕಾಳ ಕಲ್ಕರ್ ವಿಠ್ಠಲ್ ನಾಡಚ್ಚಿ, ಬಸವರಾಜು, ಸೋಲಿಗ ಸಿದ್ದಮ್ಮ, ಬಸಮ್ಮ, ದಿನೇಶ್ ಪಾಲ್ಗೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.