ADVERTISEMENT

ಮೈಸೂರು | ಅನ್ನಭಾಗ್ಯ ಯೋಜನೆಯ ಅಕ್ಕಿ ಖರೀದಿ: ದೂರು

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2025, 7:32 IST
Last Updated 25 ಆಗಸ್ಟ್ 2025, 7:32 IST
ಅಕ್ಕಿ
ಅಕ್ಕಿ   

ಮೈಸೂರು: ಅನ್ನಭಾಗ್ಯ ಯೋಜನೆಯಡಿ ದೊರೆತ ಅಕ್ಕಿಯನ್ನು ಮಾರಾಟ ಮಾಡುವ ಉದ್ದೇಶದಿಂದ ಕಡಿಮೆ ಬೆಲೆಗೆ ಸಾರ್ವಜನಿಕರಿಂದ ಖರೀದಿಸುತ್ತಿದ್ದ ಸೈಯದ್‌ ಅರ್ಬಾಜ್‌ ವಿರುದ್ಧ ನಜರ್‌ಬಾದ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

‘ನಗರದ ರಾಘವೇಂದ್ರ ಬಡಾವಣೆಯ ಕಾವೇರಿ ಮುಖ್ಯರಸ್ತೆಯಲ್ಲಿರುವ ನಂದಿನಿ ಮಿಲ್ಕ್‌ ಪಾರ್ಲರ್ ಬಳಿ ಸೈಯದ್‌ ಅರ್ಬಾಜ್‌ ಆಟೊದಲ್ಲಿ ಪಡಿತರ ಅಕ್ಕಿ ಮತ್ತು ರಾಗಿಯನ್ನು ಸಾರ್ವಜನಿಕರಿಂದ ಕಡಿಮೆ ಬೆಲೆಗೆ ಸಂಗ್ರಹಿಸುತ್ತಿದ್ದ. ಈ ಬಗ್ಗೆ ಖಚಿತ ಮಾಹಿತಿ ಪಡೆದು ದಾಳಿ ನಡೆಸಿ, ಆತನನ್ನು ವಶಕ್ಕೆ ಪಡೆದಿದ್ದು, 8 ಕ್ವಿಂಟಲ್‌ ಅಕ್ಕಿ ಮತ್ತು 16 ಕೆ.ಜಿ ರಾಗಿ ವಶಪಡಿಸಿಕೊಂಡಿದ್ದೇವೆ’ ಎಂದು ಆರೋಗ್ಯ ನಿರೀಕ್ಷಕ ಬಿ.ಎಸ್‌.ವೇಣುಗೋಪಾಲ್‌ ದೂರಿನಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT