ADVERTISEMENT

ಮೈಸೂರು ರೇಸ್‌ ಕ್ಲಬ್‌: ಆನ್‌ಲೈನ್‌ ಬೆಟ್ಟಿಂಗ್‌ಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2020, 15:10 IST
Last Updated 9 ನವೆಂಬರ್ 2020, 15:10 IST

ಮೈಸೂರು: ಕುದುರೆ ರೇಸ್‌ಗಳಿಗೆ ಆನ್‌ಲೈನ್‌ ಮೂಲಕ ಬೆಟ್ಟಿಂಗ್‌ ನಡೆಸಲು ಮೈಸೂರು ರೇಸ್‌ ಕ್ಲಬ್‌ಅವಕಾಶ ಕಲ್ಪಿಸಿದೆ. ಈ ವ್ಯವಸ್ಥೆಜಾರಿಗೆ ತಂದ ದೇಶದ ಮೊದಲ ರೇಸ್ ಕ್ಲಬ್ ಎನಿಸಿದೆ.

‘ನ.11 ರಂದುಆರಂಭವಾಗುವ ಚಳಿಗಾಲದ ರೇಸ್‌ಗಳಿಗೆ ಆನ್‌ಲೈನ್‌ ಮೂಲಕ ಬೆಟ್ಟಿಂಗ್‌ ನಡೆಸಲು ಅವಕಾಶ ಕಲ್ಪಿಸಲಾಗಿದೆ. ಸಾರ್ವಜನಿಕರು ರೇಸ್‌ ಕೋರ್ಸ್‌ಗೆ ಬರಬೇಕೆಂದಿಲ್ಲ. ತಾವಿರುವ ಸ್ಥಳದಿಂದಲೇ ಬೆಟ್ಟಿಂಗ್‌ ನಡೆಸಬಹುದು’ ಎಂದು ಮೈಸೂರು ರೇಸ್‌ ಕ್ಲಬ್‌ ಅಧ್ಯಕ್ಷ ಡಾ.ಎನ್‌.ನಿತ್ಯಾನಂದ ರಾವ್‌ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಮೈಸೂರು, ಬೆಂಗಳೂರು, ಹೈದರಾಬಾದ್‌ ಮತ್ತು ಕೋಲ್ಕತ್ತ ರೇಸ್‌ ಕ್ಲಬ್‌ಗಳಿಗೆ ಮಾತ್ರ ಆನ್‌ಲೈನ್‌ ಬೆಟ್ಟಿಂಗ್‌ ಆರಂಭಿಸಲು ಅನುಮತಿ ಲಭಿಸಿದೆ. ಈ ನಾಲ್ಕು ಕ್ಲಬ್‌ಗಳಲ್ಲಿ ನಾವೇ ಮೊದಲಾಗಿ ಆನ್‌ಲೈನ್‌ ಪೋರ್ಟಲ್‌ ಅರಂಭಿಸಿದ್ದೇವೆ. ಭಾರತದ ಕುದುರೆ ರೇಸಿಂಗ್‌ ಇತಿಹಾಸದಲ್ಲೇ ಇದು ಮೊದಲು’ ಎಂದರು.

ADVERTISEMENT

ಕರ್ನಾಟಕ ಸರ್ಕಾರದ ನಿಯಮಗಳಿಗೆ ಅನುಗುಣವಾಗಿ ಆನ್‌ಲೈನ್‌ ಬೆಟ್ಟಿಂಗ್ ಅರಂಭಿಸಲಾಗಿದೆ. ಆದ್ದರಿಂದ ರಾಜ್ಯದ ಜನರಿಗೆ ಮಾತ್ರ ಬೆಟ್ಟಿಂಗ್‌ಗೆ ಅವಕಾಶವಿದೆ. ಹೊರ ರಾಜ್ಯದವರಿಗೆ ಇಲ್ಲ. ಪೋರ್ಟಲ್‌ಗೆ ಹೆಸರು ನೋಂದಾಯಿಸುವ ವೇಳೆ ಆಧಾರ್‌ ಸಂಖ್ಯೆ‌, ಬ್ಯಾಂಕ್‌ ಖಾತೆ ವಿವರಗಳನ್ನು ನೀಡಬೇಕು ಎಂದು ಹೇಳಿದರು.

ಆನ್‌ಲೈನ್‌ ಬೆಟ್ಟಿಂಗ್‌ ಪೋರ್ಟಲ್‌ಗೆ www.betmysore.com/ www.turfwinners.com ‌ಇದೇ ವೇಳೆ ಚಾಲನೆ ನೀಡಲಾಯಿತು. ಮೈಸೂರು ರೇಸ್‌ ಕ್ಲಬ್‌ ವೆಬ್‌ಸೈಟ್‌ನಲ್ಲೂ www.mysoreraceclub.com ಲಿಂಕ್‌ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.