ADVERTISEMENT

ಮೈಸೂರು ವಿಶ್ವವಿದ್ಯಾಲಯದ ಘಟಿಕೋತ್ಸವ: 213 ಅಭ್ಯರ್ಥಿಗಳಿಗೆ ಚಿನ್ನದ ಪದಕ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2022, 6:45 IST
Last Updated 22 ಮಾರ್ಚ್ 2022, 6:45 IST
ಅಫ್ಗಾನಿಸ್ತಾನದ ಸೈಯದ್ ಕುದರತ್ ಹಾಶಿಮಿ ಕಾನೂನು ಅಧ್ಯಯನ ವಿಭಾಗದಲ್ಲಿ ಎರಡು ಚಿನ್ನದ ಪದಕ ಪಡೆದರು
ಅಫ್ಗಾನಿಸ್ತಾನದ ಸೈಯದ್ ಕುದರತ್ ಹಾಶಿಮಿ ಕಾನೂನು ಅಧ್ಯಯನ ವಿಭಾಗದಲ್ಲಿ ಎರಡು ಚಿನ್ನದ ಪದಕ ಪಡೆದರು   

ಮೈಸೂರು: ಮೈಸೂರು ವಿಶ್ವವಿದ್ಯಾಲಯದ 102ನೇ ವಾರ್ಷಿಕ ಘಟಿಕೋತ್ಸವದಲ್ಲಿ 213 ಅಭ್ಯರ್ಥಿಗಳಿಗೆ ಪದಕ ಪ್ರದಾನ ಮಾಡಲಾಯಿತು.

ಕ್ರಾಫರ್ಡ್‌ ಭವನದಲ್ಲಿ ಮಂಗಳವಾರ ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಪದವಿ ಹಾಗೂ ಪದಕ ಪ್ರದಾನ ಮಾಡಿದರು.

ಒಟ್ಟು 376 ಸ್ವರ್ಣಪದಕ, 214 ದತ್ತಿ ಬಹುಮಾನ ಹಾಗೂ 157 ಅಭ್ಯರ್ಥಿಗಳಿಗೆ ಪಿಎಚ್‌.ಡಿ ಪದವಿ ಪ್ರದಾನ ಮಾಡಲಾಯಿತು. ಒಟ್ಟು 28,581 ಅಭ್ಯರ್ಥಿಗಳಿಗೆ ಸ್ನಾತಕ ಹಾಗೂ ಸ್ನಾತಕೋತ್ತರ ಪದವಿ ಪ್ರದಾನ ಮಾಡಲಾಗುತ್ತಿದೆ.

ADVERTISEMENT

ಎಂ.ಎಸ್ಸಿ ರಸಾಯನ ವಿಜ್ಞಾನ ವಿದ್ಯಾರ್ಥಿನಿ ಜಿ.ಎಂ.ಭಾವನಾ 19 ಸ್ವರ್ಣ ಪದಕ ಹಾಗೂ ಎರಡು ದತ್ತಿ ಬಹುಮಾನ ಪಡೆದರು. ಈ ಬಾರಿ ಅತ್ಯಧಿಕ ಸ್ವರ್ಣ ‍ಪದಕಕ್ಕೆ ಭಾಜನರಾದ ಅಭ್ಯರ್ಥಿ ಕೂಡ. ಎಂ.ಎ.ಕನ್ನಡ ವಿದ್ಯಾರ್ಥಿ ಪಿ.ಮಹೇವಸ್ವಾಮಿ 14 ಚಿನ್ನದ ಪದಕ ಹಾಗೂ 3 ದತ್ತು ಬಹುಮಾನಕ್ಕೆ ‍ಪಾತ್ರರಾದರು. ಅಫ್ಗಾನಿಸ್ತಾನದ ಸೈಯದ್ ಕುದರತ್ ಹಾಶಿಮಿ ಕಾನೂನು ಅಧ್ಯಯನ ವಿಭಾಗದಲ್ಲಿ ಎರಡು ಚಿನ್ನದ ಪದಕ ಪಡೆದರು.

ರಾಷ್ಟ್ರೀಯ ಮೌಲ್ಯಾಂಕನ ಮತ್ತು ಮಾನ್ಯತಾ ಪರಿಷತ್‌ನ (ನ್ಯಾಕ್‌) ನಿರ್ದೇಶಕ ಪ್ರೊ.ಎಸ್‌.ಸಿ.ಶರ್ಮ, ಕುಲಪತಿ ಪ್ರೊ.ಜಿ.ಹೇಮಂತಕುಮಾರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.