ADVERTISEMENT

ಮೈಸೂರು ವಿ.ವಿ ಪದವಿ ಪರೀಕ್ಷೆ ಸೆ.13ಕ್ಕೆ ಮುಂದೂಡಿಕೆ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2021, 10:55 IST
Last Updated 2 ಸೆಪ್ಟೆಂಬರ್ 2021, 10:55 IST
ಮಾನಸ ಗಂಗೋತ್ರಿ
ಮಾನಸ ಗಂಗೋತ್ರಿ   

‌ಮೈಸೂರು: ಮೈಸೂರು ವಿಶ್ವವಿದ್ಯಾಲಯವು ಸೆ.3ರಂದು ಆರಂಭವಾಗಬೇಕಿದ್ದ ಪದವಿ ಪರೀಕ್ಷೆಗಳನ್ನು ಸೆ.13ಕ್ಕೆ ಮುಂದೂಡಿದೆ.

ಸ್ನಾತಕ ಪದವಿಯ 6ನೇ ಸೆಮಿಸ್ಟರ್ (ಸಿಬಿಸಿಎಸ್/ ನಾನ್‌ ಸಿಬಿಸಿಎಸ್ ಫ್ರೆಷರ್ಸ್), 2ನೇ ಸೆಮಿಸ್ಟರ್‌ (ಸಿಬಿಸಿಎಸ್ ರಿಪಿಟರ್ಸ್) ಮತ್ತು 2, 4, 6ನೇ ಸೆಮಿಸ್ಟರ್‌ನ (ನಾನ್‌ ಸಿಬಿಸಿಎಸ್‌–ರಿಪಿಟರ್ಸ್‌) ಪದವಿ ಪರೀಕ್ಷೆಗಳನ್ನು ಕುಲಪತಿ ಆದೇಶದ ಮೇರೆಗೆ ಕಾರಣಾಂತರಗಳಿಂದ ಮುಂದೂಡಲಾಗಿದೆ. ಪರಿಷ್ಕೃತ ವೇಳಾಪಟ್ಟಿಯನ್ನು ಸದ್ಯದಲ್ಲೇ ಹೊರಡಿಸಲಾಗುವುದು ಎಂದು ಪರೀಕ್ಷಾಂಗ ಕುಲಸಚಿವ ಪ್ರೊ.ಎ.ಪಿ.ಜ್ಞಾನಪ್ರಕಾಶ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT