ಮೈಸೂರು ಅರಮನೆ
ಪ್ರಜಾವಾಣಿ ಚಿತ್ರ: ರಂಜು ಪಿ
ಮೈಸೂರು: ಈ ಬಾರಿಯ ದಸರಾ ಚಲನಚಿತ್ರೋತ್ಸವದಲ್ಲಿ ಸೆ.13ರಿಂದ ವಿಶೇಷ ಹಾಗೂ ವೈವಿಧ್ಯಮಯ ಚಲನಚಿತ್ರಗಳನ್ನು ವೀಕ್ಷಿಸಲು ಉಪ ಸಮಿತಿಯು ಅವಕಾಶ ಒದಗಿಸಿದೆ.
ಮಾಲ್ ಆಫ್ ಮೈಸೂರ್‌ನ ಐನಾಕ್ಸ್ ಪರದೆಗಳಲ್ಲಿ ಚಲನಚಿತ್ರೋತ್ಸವ ನಡೆಯಲಿದೆ. ಖ್ಯಾತ ನಟಿ ಬಿ.ಸರೋಜಾದೇವಿ ಅವರ ಸವಿನೆನಪಿನಲ್ಲಿ ಅವರಿಗೆ ಗೌರವ ಸಲ್ಲಿಸಲು ‘ಭಾಗ್ಯವಂತರು’ ಚಲನಚಿತ್ರ ಪ್ರದರ್ಶಿಸಲಾಗುತ್ತಿದೆ. ಅಂಗವಿಕಲರು, ಶಾಲಾ ಮಕ್ಕಳು ಹಾಗೂ ಮಾಧ್ಯಮ ಪ್ರತಿನಿಧಿಗಳಿಗೆ ವಿಶೇಷ ಚಲನಚಿತ್ರ ಪ್ರದರ್ಶನ ಆಯೋಜಿಸಲಾಗಿದೆ.
ವಿಶ್ವ ಸಿನಿಮಾ ವಿಭಾಗದಲ್ಲಿ 17, 25 ಭಾರತೀಯ ಸಿನಿಮಾಗಳು, 18 ಕನ್ನಡ ಭಾಷೆಯವು, 9 ಮಹಿಳಾ ನಿರ್ದೇಶನದ ಚಲನಚಿತ್ರಗಳು, 8 ಮಕ್ಕಳ ಸಿನಿಮಾಗಳನ್ನು ಪ್ರದರ್ಶಿಸಲಾಗುತ್ತಿದೆ. ಹೆಸರಾಂತ ನಿರ್ದೇಶಕರು, ನಟರ ಪ್ರತಿಭೆ ಕಣ್ತುಂಬಿಕೊಳ್ಳುವ ಅವಕಾಶವಿದೆ. ಉತ್ತಮವಾದ ಸಾಮಾಜಿಕ ಸಂದೇಶ ನೀಡುವ ಚಲನಚಿತ್ರಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.
ದಸರಾ ಚಲನಚಿತ್ರೋತ್ಸವ ಉಪ ಸಮಿತಿಯಿಂದ ನಡೆಸಲಾದ ಕಿರುಚಿತ್ರ ಸ್ಪರ್ಧೆಯಲ್ಲಿ ಆಯ್ಕೆಯಾದ 10 ಕಿರುಚಿತ್ರಗಳನ್ನು ಕೂಡ ದೊಡ್ಡ ಪರದೆಯಲ್ಲಿ ಪ್ರದರ್ಶಿಸಿ ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸಲಾಗುತ್ತಿದೆ.
ವಿಶ್ವ ಸಿನಿಮಾ:
* ಆಲ್ ಕ್ವೈಟ್ ಆನ್ ದ ವೆಸ್ಟರ್ನ್ ಫ್ರಂಟ್
* ಬೆನೆಡೆಟ್ಟ
* ಬರ್ಲಿನ್ ಅಲೆಗ್ಸಾಂಡರ್‌ಫ್ಲಾಂಟ್ಜ್
* ಕ್ಲೋಸ್
* ಡಿಸಿಷನ್ ಟು ಲೀವ್
* ಎಕ್ಸ್ಯೂಮಾ
* ಗಾರ್ಡಿಯನ್ಸ್ ಆಫ್ ದಿ ಫಾರ್ಮುಲಾ
* ಇನ್ ದ ಮೂಡ್ ಫಾರ್ ಲವ್
* ಆಡಿಟ್ಟಿ
* ದಿ 47 ದ 47
* ದ ಪ್ರಾಮಿಸ್ಡ್ ಲ್ಯಾಂಡ್
* ದ ಸೀಡ್ ಆಫ್ ದಿ ಸೇಕ್ರೆಡ್ ಫಿಗ್
* ದಿ ಟೀಚರ್ಸ್ ಲಾಂಜ್
* ಅಂಡಿನ್
* ಯೂನಿವರ್ಸಲ್ ಲಾಂಗ್ವೇಜ್
* ವೆನ್ ದಿ ಲೈಟ್ ಬ್ರೇಕ್ಸ್
ಭಾರತೀಯ ಸಿನಿಮಾ
* 10ನೇ ಕ್ಲಾಸು ಸ್ವಲ್ಪ ಮಾಸು
* ಅಜೂರ್
* ಅಡವಿ
* ಅಮರನ್
* ಅಂಶು
* ಬೆಲೈನ್
* ಚಂಡಮಾರುತ
* ಕೃತ್ಯ
* ಮಂದಾರ
* ನುಡಿಮುತ್ತು
* ರಿಧಂ ಆಫ್ ದಿ ಧಮ್ಮಂ
* ಈ ಪಾದ ಪುಣ್ಯಪಾದ
* ಫೆಮಿನಿಚಿ ಫಾತಿಮಾ
* ಇಂಬು
* ಕನಸೊಂದು ಶುರುವಾಗಿದೆ
* ಲಚ್ಚಿ
* ಲಿಟಲ್ ಪ್ಲಾನೆಟ್; ಎ ಟೇಲ್ ಪ್ರಾಗ್ಸ್
* ಮಂಗ್ತಾ ಜೋಗಿ
* ನಿಂಬಿಯಾ ಬನಾದ ಮ್ಯಾಗ
* ಪರಜ್ಯಾ
* ಪಿದಾಯಿ
* ಪುಟ್ಟಣ್ಣನ ಕತೆ
* ಶಾಂತಿನಿಕೇತನ್
* ಸ್ವಪ್ನ ಮಂಟಪ
* ಎಲ್ಲೋ ಜೋಗಪ್ಪ ನಿನ್ನರಮನೆ
ಕನ್ನಡ ಸಿನಿಮಾ
* ಎ
* ಅಜ್ಞಾತವಾಸಿ
* ಬಘೀರ
* ಭೈರತಿ ರಣಗಲ್
* ಛೂಮಂಥರ್
* ಎಕ್ಕ
* ಗೋಧಿ ಬಣ್ಣ ಸಾಧಾರಣ ಮೈಕಟ್ಟು
* ಲೂಸಿಯ
* ಮಾದೇವ
* ಮಹಾವತಾರ್ ನರಸಿಂಹ
* ಮ್ಯಾಕ್ಸ್
* ಮಯೂರ
* ಓಂ
* ರಾಜಕಮಾರ
* ರುದ್ರ ಗರುಡ ಪುರಾಣ
* ಸು ಫ್ರಮ್ ಸೋ
* ತಿಥಿ
* ಯುಐ
ಮಹಿಳಾ ನಿರ್ದೇಶನದ ಸಿನಿಮಾಗಳು
* ಆಫ್ಟರ್ ಸನ್
* ಅಪ್ಪುರಂ
* ಸುಳಿ
* ಚುರುಮುರಿಯ
* ನಡುಬೆಟ್ಟು ಅಪ್ಪಣ್ಣ
* ಗುಡ್ ಒನ್
* ಡಾಹೋಮೆ
* ಐಯ್ಯಾಮ್ ಯುವರ್ ಮ್ಯಾನ್
* ದಿ ಸಬ್‌ಸ್ಟೆನ್ಸ್
ಮಕ್ಕಳ ಸಿನಿಮಾ
* ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು
* ಚಿನ್ನ ಕಥಾ ಕಾಡು
* ಚಿಣ್ಣರ ಕ್ರಾಂತಿ
* ಫೈಜೂ ಮತ್ತು ಹುಂಜ
* ಲೈಟ್ ಹೌಸ್
* ಮಿಕ್ಕ ಬಣ್ಣದ ಹಕ್ಕಿ
* ಮೊಗ್ಗುಗಳು
* ನಂದಿನಿ
ಕಿರುಚಿತ್ರ
* ಅದೃಷ್ಟ ಲಕ್ಷ್ಮಿ
* ಆ ಕ್ಷಣ
* ಎರಡ್ರುಪಾಯಿ
* ಹಿಂಬಾಲಿಸು
* ಹಬ್ಬದ ಹಸಿವು
* ಲಕುಮಿ
* ಮಾರ್ವೆನ್
* ನನ್ನ ಪ್ರಪಂಚ
* ಕಾಲಾಂತರ
* ಸೆಕ್ಸ್ ಟಾಯ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.