ಮೈಸೂರು: ಮೈಸೂರು ಅರಮನೆ ಪ್ರವೇಶ ಶುಲ್ಕವನ್ನು ₹ 70ರಿಂದ 100ಕ್ಕೆ ಹೆಚ್ಚಿಸಲಾಗಿದೆ.
ವಾರಾಂತ್ಯ, ಸರ್ಕಾರಿ ರಜೆ ದಿನಗಳಲ್ಲಿಯೂ ಪ್ರವೇಶ ಶುಲ್ಕ ₹100 ಇರಲಿದೆ. ವಿದೇಶಿಗರಿಗೂ ಇಷ್ಟೇ ಶುಲ್ಕ ನಿಗದಿಪಡಿಸಲಾಗಿದೆ. 18 ವರ್ಷದೊಳಗಿನ ಮಕ್ಕಳಿಗೆ ₹ 50 ಶುಲ್ಕ ವಿಧಿಸಲು ಅರಮನೆ ಮಂಡಳಿ ನಿರ್ಧರಿಸಿದೆ.
‘ಕೋವಿಡ್ಗೆ ಮುನ್ನ ವಾರ್ಷಿಕ ₹ 17 ಕೋಟಿ ಆದಾಯ ಬರುತಿತ್ತು. ಎರಡು ವರ್ಷಗಳಿಂದ ಆದಾಯಕ್ಕೆಪೆಟ್ಟು ಬಿದ್ದಿದೆ. ಪ್ರವಾಸಿಗರ ಸಂಖ್ಯೆ ಇನ್ನೂ ಹೆಚ್ಚಿಲ್ಲ. ನಿರ್ವಹಣೆಗೆ ಪ್ರತಿ ತಿಂಗಳು ₹ 30 ಲಕ್ಷ ವೆಚ್ಚವಾಗುತ್ತದೆ. ಸಿಬ್ಬಂದಿ ವೇತನವನ್ನೂ ಮಂಡಳಿ ವತಿಯಿಂದಲೇ ಭರಿಸಬೇಕು. ಹಾಗೆಯೇ, ಅರಮನೆ ದೀಪಾಲಂಕಾರ ಸೇರಿ ವಿದ್ಯುತ್ ದರವೇ ತಿಂಗಳಿಗೆ ₹ 10 ಲಕ್ಷ ಬರುತ್ತದೆ’ ಎಂದು ಅರಮನೆ ಮಂಡಳಿ ಉಪನಿರ್ದೇಶಕ ಟಿ.ಎಸ್.ಸುಬ್ರಮಣ್ಯ ‘ಪ್ರಜಾವಾಣಿ’ಗೆ ತಿಳಿಸಿದರು.
‘ಈ ಹಿಂದೆ ಶನಿವಾರ, ಭಾನುವಾರ ಹಾಗೂ ರಜೆ ದಿನಗಳಲ್ಲಿ ಹೆಚ್ಚು ಶುಲ್ಕ ವಿಧಿಸುತ್ತಿದ್ದೇವೆ. ಈಗ ಎಲ್ಲಾ ದಿನಗಳಲ್ಲೂ ಏಕರೂಪ ಶುಲ್ಕ ವಿಧಿಸಲಾಗುವುದು. ಪ್ರವೇಶ ಶುಲ್ಕ ಪರಿಷ್ಕರಿಸದೆ 4 ವರ್ಷಗಳಾಗಿತ್ತು’ ಎಂದರು.
ಅರಮನೆ ಪ್ರವೇಶ ಶುಲ್ಕ (₹ ಗಳಲ್ಲಿ)
ಯಾರಿಗೆ? | ಹೊಸ ದರ | ಹಳೆಯ ದರ |
ವಯಸ್ಕರು | ₹100 | ₹70 |
ವಿದೇಶಿಗರು | ₹100 | ₹70 |
ವಾರಾಂತ್ಯ/ಸರ್ಕಾರಿ ರಜೆ ದಿನ;
ವಯಸ್ಕರು | ₹100 | ₹90 |
ಮಕ್ಕಳು | ₹50 | ₹30 |
ವಿದ್ಯಾರ್ಥಿಗಳು | ₹30 | ₹10 |
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.