ADVERTISEMENT

ನೋಡಿ| ಕೆ.ಆರ್‌. ಆಸ್ಪತ್ರೆ: ಮೂಲ ಗಾಯಕ್ಕೆ ಚಿಕಿತ್ಸೆ ಸಿಗುವುದೇ?

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2021, 1:52 IST
Last Updated 16 ಆಗಸ್ಟ್ 2021, 1:52 IST

ಮೈಸೂರು ಜಿಲ್ಲೆಯ ‘ದೊಡ್ಡಾಸ್ಪತ್ರೆ’ ಎಂದೇ ಜನಪ್ರಿಯವಾಗಿರುವ ಕೆ.ಆರ್‌.ಆಸ್ಪತ್ರೆಗೆ ಮೇಜರ್‌ ಸರ್ಜರಿ ನಡೆಸುವುದಾಗಿ ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌ ಇತ್ತೀಚೆಗೆ ಹೇಳಿದ್ದರು. ಸಮಸ್ಯೆಗಳ ಕೂಪವಾಗಿರುವ ಆಸ್ಪತ್ರೆಯ ಮೂಲ ರೋಗಕ್ಕೇ ಶಸ್ತ್ರಚಿಕಿತ್ಸೆ ಮಾಡಬೇಕು ಎಂಬುದು ರೋಗಿಗಳು, ವೈದ್ಯರು ಹಾಗೂ ಸಾರ್ವಜನಿಕರ ಆಗ್ರಹವಾಗಿದೆ. 1,041 ಹಾಸಿಗೆಗಳ ಸೌಲಭ್ಯ ಇರುವ ಆಸ್ಪತ್ರೆಗೆ ಪ್ರತಿದಿನ ಸಾವಿರಾರು ರೋಗಿಗಳು ಬರುತ್ತಾರೆ. ಆದರೆ, ಮೂಲಸೌಕರ್ಯ, ವೈದ್ಯರು, ದಾದಿಯರು, ಸಹಾಯಕ ಸಿಬ್ಬಂದಿ ಹಾಗೂ ಭದ್ರತಾ ಸಿಬ್ಬಂದಿಯ ಕೊರತೆಯಿಂದಾಗಿ ರೋಗಿಗಳು ಪರಿತಪಿಸುವಂತಾಗಿದೆ. ಕಾಯಂ ವೈದ್ಯಕೀಯ ಸೂಪರಿಂಟೆಂಡೆಂಟ್‌ಗಳನ್ನು ನೇಮಿಸುವುದು, ವೈದ್ಯರು, ದಾದಿಯರ ನೇಮಕ, ಔಷಧಗಳ ಸಮರ್ಪಕ ಪೂರೈಕೆಗೆ ಒತ್ತು ನೀಡಬೇಕು ಎಂಬುದು ರೋಗಿಗಳ ಆಗ್ರಹವಾಗಿದೆ.

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT