ADVERTISEMENT

ನಂಜನಗೂಡು: 5 ಜಾನುವಾರು ಕಳವು

​ಪ್ರಜಾವಾಣಿ ವಾರ್ತೆ
Published 11 ಜನವರಿ 2026, 4:47 IST
Last Updated 11 ಜನವರಿ 2026, 4:47 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ನಂಜನಗೂಡು: ನಗರದ ಶ್ರೀಕಂಠೇಶ್ವರಸ್ವಾಮಿ ದೇವಾಲಯಕ್ಕೆ ಭಕ್ತರು ಹರಕೆ ಬಿಟ್ಟ ಗೂಳಿ ಸೇರಿದಂತೆ ಒಕ್ಕಲಗೇರಿ ನಿವಾಸಿಗಳಿಗೆ ಸೇರಿದ 5 ಜಾನುವಾರುಗಳನ್ನು ಕಳ್ಳರು ಶುಕ್ರವಾರ ಕದ್ದಿದ್ದಾರೆ.

ದೇವಸ್ಥಾನಕ್ಕೆ ಭಕ್ತರು ಹರಕೆ ರೂಪದಲ್ಲಿ ಬಿಟ್ಟಿದ್ದ ಕಪ್ಪು ಬಣ್ಣದ ಗೂಳಿ, ಒಕ್ಕಲಗೇರಿ ನಿವಾಸಿ ಎನ್.ಶಿವಕುಮಾರ್ ಅವರ 1 ವರ್ಷದ ಗಂಡು ಕರು, ಗೋಪಾಲ ಎಂಬುವರಿಗೆ ಸೇರಿದ 4 ವರ್ಷದ ತೆನೆ ಹಸು, ಅಪ್ಪು ಎಂಬುವರಿಗೆ ಸೇರಿದ 1 ವರ್ಷದ ಗಂಡು ಕರು, ಲತಾ ಎಂಬುವರಿಗೆ ಸೇರಿದ 1 ವರ್ಷದ ಹೆಣ್ಣು ಕರು ಸೇರಿದಂತೆ 5 ರಾಸುಗಳು ಕಳವಾಗಿವೆ ಎಂದು ಎನ್.ಶಿವಕುಮಾರ್ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ADVERTISEMENT

 ಹರಕೆ ಗೋವುಗಳನ್ನು ಶ್ರೀಕಂಠೇಶ್ವರಸ್ವಾಮಿ ದೇವಸ್ಥಾನ ಸಮಿತಿ ಸಂರಕ್ಷಣೆ ಮಾಡದ್ದರಿಂದ ಮೂರು ವರ್ಷಗಳಿಂದ ಅವುಗಳು ಗೋಕಳ್ಳರ ಪಾಲಾಗುತ್ತಿವೆ. ಈ ಬಾರಿ ಸ್ಥಳೀಯ ನಿವಾಸಿಗಳ ರಾಸುಗಳೂ ಕಳವಾಗಿರುವುದು ಆತಂಕ ಉಂಟುಮಾಡಿದೆ ಎಂದು ಸ್ಥಳೀಯ ನಿವಾಸಿಗಳು ದೂರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.