ಸಾವು (ಪ್ರಾತಿನಿಧಿಕ ಚಿತ್ರ)
ನಂಜನಗೂಡು: ಬದನವಾಳು ಗ್ರಾಮದ ಬಳಿ ಕಳೆದ ಮಂಗಳವಾರ ಎರಡು ಬೈಕ್‌ಗಳ ನಡುವೆ ನಡೆದಿದ್ದ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಹೆಡತಲೆ ಗ್ರಾಮದ ಬಾಲಕಿ ಆದ್ಯ (5) ಶುಕ್ರವಾರ ಮೃತಪಟ್ಟಿದ್ದಾಳೆ.
ರಸ್ತೆ ಅಪಘಾತದಲ್ಲಿ ಹೆಡತಲೆ ಗ್ರಾಮದ ಮಹೇಶ್ ಮತ್ತು ರಾಣಿ ದಂಪತಿಯ ಮಗಳು ಆದ್ಯ ಜೊತೆ ಬೈಕಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಇನ್ನೊಂದು ಬೈಕ್ ಡಿಕ್ಕಿಯಾಗಿ ತೀವ್ರ ಗಾಯಗೊಂಡು ಬುಧವಾರ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಳು. ಮಗುವಿನ ಚಿಕಿತ್ಸೆಯ ವೆಚ್ಚ ₹ 1.5 ಲಕ್ಷ ಪಾವತಿಸಲು ಪೋಷಕರು ಪರದಾಡುತ್ತಿದ್ದ ವೇಳೆ , ಮಗುವಿನ ದೊಡ್ಡಮ್ಮ ಗುರುವಾರ ಭಿಕ್ಷೆ ಬೇಡಿದ್ದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಶಾಸಕ ದರ್ಶನ್ ಧ್ರುವನಾರಾಯಣ ಆಸ್ಪತ್ರೆಗೆ ತೆರಳಿ ಆದ್ಯ ಕುಟುಂಬದವರಿಗೆ ಸಾಂತ್ವನ ಹೇಳಿ, ಧನ ಸಹಾಯ ಮಾಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.