ADVERTISEMENT

ಮೈಸೂರು: ರಾತ್ರಿ ಕರ್ಫ್ಯೂ ಸ್ವಯಂ ಪ್ರೇರಿತ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2021, 5:18 IST
Last Updated 23 ಏಪ್ರಿಲ್ 2021, 5:18 IST
ರಾತ್ರಿ ಕರ್ಫ್ಯೂವಿನ ವೇಳೆ ಸಂಚರಿಸುತ್ತಿದ್ದ ವಾಹನ ಸವಾರರ ದಾಖಲೆಗಳನ್ನು ಸಂಚಾರ ಪೊಲೀಸರು ಪರಿಶೀಲಿಸಿದರು
ರಾತ್ರಿ ಕರ್ಫ್ಯೂವಿನ ವೇಳೆ ಸಂಚರಿಸುತ್ತಿದ್ದ ವಾಹನ ಸವಾರರ ದಾಖಲೆಗಳನ್ನು ಸಂಚಾರ ಪೊಲೀಸರು ಪರಿಶೀಲಿಸಿದರು   

ಮೈಸೂರು: ರಾಜ್ಯ ಸರ್ಕಾರ ಘೋಷಿಸಿರುವ ರಾತ್ರಿ ಕರ್ಫ್ಯೂ ಮೈಸೂರಿನಲ್ಲಿ ಗುರುವಾರ ಯಶಸ್ವಿಯಾಯಿತು.

ರಾತ್ರಿ 9 ಗಂಟೆ ವೇಳೆಗೆ ಬಹುತೇಕ ಅಂಗಡಿಗಳು ಬಾಗಿಲು ಮುಚ್ಚಿದ್ದವು. ಜನ ಸಂಚಾರವೂ ವಿರಳವಾಗಿತ್ತು. ಸಮಯ ಕಳೆದಂತೆ ಯಾವೊಂದು ವಾಹನದ ಸಂಚಾರ ಕಂಡು ಬರಲಿಲ್ಲ.

ನಗರದ ವಿವಿಧ ವೃತ್ತಗಳಲ್ಲಿ ಸಂಚಾರ ಪೊಲೀಸರು ನಾಕಾಬಂದಿ ಕೈಗೊಂಡಿದ್ದರು. ನಿಗದಿತ ಅವಧಿ ಮೀರಿ ವಾಹನಗಳಲ್ಲಿ ಚಲಿಸುತ್ತಿದ್ದವರನ್ನು ತಡೆದು ತಪಾಸಣೆಗೊಳಪಡಿಸಿದರು. ಅಧಿಕೃತ ದಾಖಲೆ ತೋರಿಸಿದವರನ್ನು ಬಿಟ್ಟು ಕಳುಹಿಸಿದರೆ; ಅನಗತ್ಯವಾಗಿ ಸಂಚರಿಸುತ್ತಿದ್ದವರಿಗೆ ಖಡಕ್‌ ಎಚ್ಚರಿಕೆ ನೀಡಿದ ದೃಶ್ಯ ಗೋಚರಿಸಿದವು.

ADVERTISEMENT

ಬಹುತೇಕರು ಸ್ವಯಂ ಪ್ರೇರಿತರಾಗಿ ರಾತ್ರಿ ಕರ್ಫ್ಯೂವಿಗೆ ಸಹಕರಿಸಿದರು. ತಡರಾತ್ರಿ ಇಡೀ ನಗರ ನಿರ್ಜನವಾಗಿತ್ತು. ಪೊಲೀಸರ ಗಸ್ತು ಸಹ ಅಷ್ಟಕ್ಕಷ್ಟೇ ಎಂಬಂತೆ ಕಂಡು ಬಂದಿತು. ಪ್ರಮುಖ ರಸ್ತೆಗಳಲ್ಲಿ ಯಾವೊಂದು ಸಂಚಾರ ಕಂಡು ಬರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.