ADVERTISEMENT

ಮನೇಕಾ ಗಾಂಧಿಗೆ ನೋಟಿಸ್‌

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2021, 2:28 IST
Last Updated 8 ಫೆಬ್ರುವರಿ 2021, 2:28 IST

ಮೈಸೂರು: ಸಂಸದೆಮನೇಕಾಗಾಂಧಿ ಅವರಿಗೆ ಇಲ್ಲಿನ ಒಂದನೇ ಜಿಲ್ಲಾ ಮತ್ತು ಸೆಷೆನ್ಸ್ ನ್ಯಾಯಾಲಯ ಮಾನನಷ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರ ನೋಟಿಸ್ ಜಾರಿ ಮಾಡಿದೆ.

ವಿಚಾರಣೆಯನ್ನುಮಾರ್ಚ್ 1ಕ್ಕೆ ಮುಂದೂಡಿದೆ. ಇಲ್ಲಿನ ನಿವಾಸಿ, ಭಾರತೀಯ ಪ್ರಾಣಿ ಕಲ್ಯಾಣ ಸಮಿತಿ ಸದಸ್ಯ ಡಾ.ಎಸ್.ಕೆ.ಮಿತ್ತಲ್‌ ಅವರು 2018ರಲ್ಲಿ ಈ ಪ್ರಕರಣ ದಾಖಲಿಸಿದ್ದರು.

ಅವರು ಸಮಿತಿಯ ಪರಿಶೀಲನಾ ಸಮಿತಿ ಮುಖ್ಯಸ್ಥರಾಗಿದ್ದಾಗ ಸರಿಯಾಗಿಕೆಲಸ ಮಾಡಿಲ್ಲ ಎಂದು ಆರೋಪಿಸಿ ಮನೇಕಾ ಗಾಂಧಿ ಅಂದಿನ ಕೇಂದ್ರ ಪರಿಸರ ಸಚಿವ ಡಾ.ಹರ್ಷವರ್ಧನ್ ಅವರಿಗೆ ಪತ್ರ ಬರೆದಿದ್ದರು.ಹೀಗಾಗಿ, ಮಿತ್ತಲ್ ಅವರುಕೋರ್ಟ್‌ ಮೊರೆ ಹೋಗಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.