ಬೆಂಗಳೂರು: ನಾಡಿನ ಹೆಮ್ಮೆಯ ಯುವ ದಸರಾವನ್ನು ಉದ್ಘಾಟಿಸಲು ಆಗಮಿಸಬೇಕು ಎಂದು ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್
ಪಿ. ವಿ. ಸಿಂಧೂ ಅವರಿಗೆ ಸಿ.ಎಂ ಆಹ್ವಾನ ನೀಡಿದ್ದಾರೆ.
‘ಕ್ರೀಡಾ ಕ್ಷೇತ್ರದಲ್ಲಿ ನೀವು ಅತ್ಯುನ್ನತ ಸಾಧನೆ ಮಾಡಿ ಯುವಕರಿಗೆ ಪ್ರೇರಣೆಯಾಗಿದ್ದೀರಿ. ಈ ಬಾರಿ ನಡೆಯುತ್ತಿರುವ 410ನೇ ದಸರಾ ಸಮಾರಂಭದ ಯುವ ದಸರಾವನ್ನು ಉದ್ಘಾಟಿಸುವ ಮೂಲಕ ನಾವು ನೀಡುತ್ತಿರುವ ಗೌರವ ಸ್ವೀಕರಿಸಬೇಕು’ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.