ADVERTISEMENT

ಭತ್ತ ಮಾರಾಟಕ್ಕೆ 265 ರೈತರು ನೋಂದಣಿ

16ರಿಂದ ಖರೀದಿ, 40 ಕ್ವಿಂಟಲ್‌ ಖರೀದಿ ಮಿತಿ, ಬೆಂಬಲ ಬೆಲೆ ಕ್ವಿಂಟಲ್‌ಗೆ ₹ 1, 750

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2018, 15:37 IST
Last Updated 12 ಡಿಸೆಂಬರ್ 2018, 15:37 IST

ಮೈಸೂರು: ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಭತ್ತ ಮಾರಾಟಕ್ಕೆ ರೈತರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಭತ್ತ ಖರೀದಿಸಲು ಜಿಲ್ಲೆಯಲ್ಲಿ ಸ್ಥಾಪಿಸಿರುವ 12 ನೋಂದಣಿ ಕೇಂದ್ರಗಳಲ್ಲಿ ಇದುವರೆಗೆ 265 ರೈತರು ಮಾತ್ರ ಹೆಸರು ನೋಂದಾಯಿಸಿದ್ದಾರೆ.

ಭತ್ತ ಖರೀದಿಸುವ ಪ್ರಕ್ರಿಯೆ ಇದೇ ತಿಂಗಳು 16ರಂದು ಆರಂಭವಾಗಲಿದ್ದು, ಮಾರ್ಚ್‌ 31ರವರೆಗೆ ನಡೆಯಲಿದೆ. ನೋಂದಾಯಿತ ಸಣ್ಣ ಹಾಗೂ ಅತಿ ಸಣ್ಣ ರೈತರಿಂದ ಗರಿಷ್ಠ 40 ಕ್ವಿಂಟಲ್‌ ಭತ್ತ ಖರೀದಿ ಮಾಡಲಾಗುವುದು ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಜಂಟಿ ನಿರ್ದೇಶಕ ಪಿ.ಶಿವಣ್ಣ ಪತ್ರಿಕಾಗೋಷ್ಠಿಯಲ್ಲಿ ಬುಧವಾರ ತಿಳಿಸಿದರು.

‘ಕರ್ನಾಟಕ ರಾಜ್ಯ ಉಗ್ರಾಣ ನಿಗಮದ ಮೂಲಕ ಸಾಮಾನ್ಯ ಭತ್ತವನ್ನು ₹ 1,750 ಹಾಗೂ ಗ್ರೇಡ್‌ ‘ಎ’ ಭತ್ತವನ್ನು ₹ 1,770 ಬೆಂಬಲ ದರದಲ್ಲಿ ಖರೀದಿಸಲಾಗುವುದು. ಹಣವನ್ನು 14 ದಿನಗಳಲ್ಲಿ ಮಾರಾಟಗಾರರ ಖಾತೆಗೆ ಹಾಕಲಾಗುವುದು. ಹೆಸರು ನೋಂದಣಿ ಡಿ.5ರಂದು ಆರಂಭವಾಗಿದ್ದು, 15ಕ್ಕೆ ಕೊನೆಗೊಳ್ಳಲಿದೆ. ಮಧ್ಯವರ್ತಿಗಳು/ಏಜೆಂಟರು ನೋಂದಣಿ ಕೇಂದ್ರಗಳಿಗೆ ಭತ್ತವನ್ನು ತಂದಲ್ಲಿ ಅಂಥವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ADVERTISEMENT

‘ಹೆಸರು ನೋಂದಾಯಿಸಿಕೊಳ್ಳುವ ರೈತರು ಕಡ್ಡಾಯವಾಗಿ ಆಧಾರ್‌ ಸಂಖ್ಯೆ, ಪಹಣಿ, ಭಾವಚಿತ್ರ ಹಾಗೂ ಐಎಫ್‌ಎಸ್‌ಸಿ ಕೋಡ್‌ ಹೊಂದಿರುವ ಬ್ಯಾಂಕ್‌ ಖಾತೆಯ ಪಾಸ್‌ ಬುಕ್‌ ತರಬೇಕು’ ಎಂದರು.

‘ರೈತರು ಇನ್ನೂ ಹೆಚ್ಚಿನ ಬೆಲೆಗೆ ಖಾಸಗಿ ವ್ಯಕ್ತಿಗಳಿಗೂ ಭತ್ತ ಮಾರಾಟ ಮಾಡಬಹುದು. ಖರೀದಿ ಕೇಂದ್ರ ತೆರೆಯುತ್ತಿರುವ ಕಾರಣ ಮಾರುಕಟ್ಟೆಯಲ್ಲಿ ಭತ್ತದ ಬೆಲೆ ಮತ್ತಷ್ಟು ಹೆಚ್ಚಿದೆ’ ಎಂದು ಹೇಳಿದರು.

**

ಮೈಸೂರು ಜಿಲ್ಲೆಯಲ್ಲಿ ಭತ್ತದ ಉತ್ಪಾದನೆ ಎಷ್ಟು?

ತಾಲ್ಲೂಕು; ಪ್ರಮಾಣ (ಮೆಟ್ರಿಕ್‌ ಟನ್‌ಗಳಲ್ಲಿ)

ಮೈಸೂರು; 30,592

ನಂಜನಗೂಡು; 79,984

ತಿ.ನರಸೀಪುರ; 1,23,699

ಹುಣಸೂರು; 48,342

ಕೆ.ಆರ್‌.ನಗರ; 1,26,295

ಎಚ್‌.ಡಿ.ಕೋಟೆ; 33,631

ಪಿರಿಯಾಪಟ್ಟಣ; 40,900

ಒಟ್ಟು; 4,83,443

**

ಮೈಸೂರು ಜಿಲ್ಲೆಯಲ್ಲಿ ಎಷ್ಟು ಹೆಕ್ಟೇರ್‌ನಲ್ಲಿ ಭತ್ತ ಬಿತ್ತನೆ?

ತಾಲ್ಲೂಕು; ಪ್ರದೇಶ (ಹೆಕ್ಟೇರ್‌ಗಳಲ್ಲಿ)

ಮೈಸೂರು; 6,372

ನಂಜನಗೂಡು; 16,522

ತಿ.ನರಸೀಪುರ; 25,543

ಹುಣಸೂರು; 9,990

ಕೆ.ಆರ್‌.ನಗರ; 20,100

ಎಚ್‌.ಡಿ.ಕೋಟೆ; 6,950

ಪಿರಿಯಾಪಟ್ಟಣ; 8,465

ಒಟ್ಟು; 93,942

**

ಜಿಲ್ಲೆಯಲ್ಲಿ ಎಲ್ಲೆಲ್ಲಿ ಖರೀದಿ ಕೇಂದ್ರ?

ಕೇಂದ್ರ; ಸ್ಥಳ

ಮೈಸೂರು; ಎಪಿಎಂಸಿ ಯಾರ್ಡ್‌, ಬಂಡಿಪಾಳ್ಯ

ನಂಜನಗೂಡು; ಎಪಿಎಂಸಿ ಯಾರ್ಡ್‌

ಬಿಳಿಗೆರೆ; ಪಿಎಸಿಸಿಬಿ ಆವರಣ

ತಿ.ನರಸೀಪುರ; ಎಪಿಎಂಸಿ ಯಾರ್ಡ್‌

ಬನ್ನೂರು; ಎಪಿಎಂಸಿ ಯಾರ್ಡ್‌

ಹುಣಸೂರು; ಎಪಿಎಂಸಿ ಯಾರ್ಡ್‌‌+ ನೋಂದಣಿ ಕೇಂದ್ರ, ರತ್ನಪುರಿ

ಕೆ.ಆರ್‌.ನಗರ; ಎಪಿಎಂಸಿ ಯಾರ್ಡ್‌

ಚುಂಚನಕಟ್ಟೆ; ಶ್ರೀರಾಮ ಸಹಕಾರ ಸಕ್ಕರೆ ಕಾರ್ಖಾನೆ ಉಗ್ರಾಣ‌

ಎಚ್‌.ಡಿ.ಕೋಟೆ; ಎಪಿಎಂಸಿ ಯಾರ್ಡ್‌, ಸರಗೂರು

ಪಿರಿಯಾಪಟ್ಟಣ; ಎಪಿಎಂಸಿ ಯಾರ್ಡ್‌

ಬೆಟ್ಟದಪುರ; ಎಪಿಎಂಸಿ ಯಾರ್ಡ್‌

**

ಜಿಲ್ಲೆಯಲ್ಲಿ ಬಿಪಿಎಲ್‌ ಪಡಿತರ ಚೀಟಿ ಸ್ಥಿತಿಗತಿ

* ಒಟ್ಟು ಬಿಪಿಎಲ್‌ ಕಾರ್ಡ್‌ದಾರರು: 7,03,464

* ಹೊಸದಾಗಿ ಸಲ್ಲಿಕೆಯಾದ ಅರ್ಜಿ: 15,739

* ವಾಪಸ್‌ ಪಡೆದವರು: 605

* ತಿರಸ್ಕೃತ: 760

* ವಿತರಣೆ: 7,456

* ವಿತರಣೆ ಪ್ರಕ್ರಿಯೆ: 7,668

* ಒಟ್ಟು ಎಪಿಎಲ್‌ ಕಾರ್ಡ್‌ದಾರರು: 19,860

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.