ಮೈಸೂರು: ಗೋಕುಲಂ ಯೋಗ ವಿತ್ ಶ್ರೀನಾಥ ಕೇಂದ್ರದಲ್ಲಿ ಪಟ್ಟಾಭಿ ಜೋಯಿಸ್ ಜಯಂತ್ಯುತ್ಸವವನ್ನು ಬಿ.ಆರ್. ನಟರಾಜ್ ಜೋಯ್ಸ್ ಉದ್ಘಾಟಿಸಿದರು.
ಬಳಿಕ ಮಾತನಾಡಿ, ‘ಕಡು ಬಡತನದಿಂದ ಬಂದ ಪಟ್ಟಾಭಿ ಜೋಯಿಸ್ ತಮ್ಮ ಸಂಕಲ್ಪ ಶಕ್ತಿಯಿಂದ ಯೋಗವನ್ನು ವಿಶ್ವ ಮಾನ್ಯವನ್ನಾಗಿ ಮಾಡಿದರು’ ಎಂದರು.
‘ಕೌಶಿಕ ಗ್ರಾಮದಿಂದ ಬಂದ ಪಟ್ಟಾಭಿ ಜೋಯಿಸ್ ಮೈಸೂರಿನ ಸಂಸ್ಕೃತ ಪಾಠಶಾಲೆಯಲ್ಲಿ ಸಂಸ್ಕೃತದೊಂದಿಗೆ ಕೃಷ್ಣಮಾಚಾರ್ಯರ ಬಳಿ ಯೋಗವನ್ನು ಅಭ್ಯಸಿಸಿದರು. ಗುರುಗಳು ಮೈಸೂರು ಬಿಟ್ಟು ಚೆನ್ನೈಗೆ ತೆರಳಿದ ನಂತರ ಜೋಯಿಸ್ ಮೈಸೂರನ್ನೇ ತಮ್ಮ ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡರು’ ಎಂದರು.
ಮೈಸೂರು ಯೋಗ ಒಕ್ಕೂಟದ ಅಧ್ಯಕ್ಷ ಕೆ.ಜಿ.ದೇವರಾಜ್ ಮಾತನಾಡಿ, ‘ಗೋಕುಲಂ ಯೋಗದ ಕೇಂದ್ರವಾಗಿ ಬೆಳೆಯಲು ಪಟ್ಟಾಭಿ ಜೋಯಿಸರೇ ನೇರ ಕಾರಣ’ ಎಂದು ಹೇಳಿದರು.
ಕೆ. ರಘುರಾಮ್ ವಾಜಪೇಯಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್, ಮೈಸೂರು ಯೋಗ ಒಕ್ಕೂಟದ ಕಾರ್ಯಾಧ್ಯಕ್ಷ ಡಾ.ಬಿ.ಪಿ.ಮೂರ್ತಿ, ಕೇಂದ್ರದ ಸಂಸ್ಥಾಪಕ ಅಧ್ಯಕ್ಷ ಡಾ. ಬಿ.ಶ್ರೀನಾಥ್, ಹಿಮಾಲಯ ಪ್ರತಿಷ್ಠಾನದ ಅಧ್ಯಕ್ಷ ಎನ್. ಅನಂತ, ಹರ್ಷವರ್ಧನ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.