ಅಪಘಾತ
–ಪ್ರಾತಿನಿಧಿಕ ಚಿತ್ರ
ಮೈಸೂರು: ತಾಲ್ಲೂಕಿನ ದುದ್ದಗೆರೆ- ಲಕ್ಷ್ಮೀಪುರ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಶ್ರೀರಂಗಪಟ್ಟಣ ತಾಲ್ಲೂಕು ಚನ್ನಹಳ್ಳಿ ಬೋರೆ ಗ್ರಾಮದ ನಿವಾಸಿ ಬಾಲಾಜಿ (51) ಅವರಿಗೆ ಬೈಕ್ ಡಿಕ್ಕಿಯಾಗಿ ಮೃತಪಟ್ಟರು.
‘ಬಾಲಾಜಿ ಅವರು ಕಬ್ಬು ಕಡಿಯುವ ಕೆಲಸ ಮಾಡಿಕೊಂಡಿದ್ದು, ನ.14 ರಂದು ಕೆಲಸಕ್ಕಾಗಿ ಮೈಸೂರು ತಾಲ್ಲೂಕಿನ ದುದ್ದಗೆರೆ ಗ್ರಾಮಕ್ಕೆ ಬಂದಿದ್ದರು. ಕೆಲಸ ಮುಗಿಸಿದ ಅವರು ಮನೆಗೆ ನಡೆದುಕೊಂಡು ಹೋಗುತ್ತಿದ್ದಾಗ ಹಿಂದಿನಿಂದ ವೇಗವಾಗಿ ಬಂದ ಬೈಕ್ ಡಿಕ್ಕಿಯಾಯಿತು. ಕೂಡಲೇ ಅವರನ್ನು ಕೆ.ಆರ್. ಆಸ್ಪತ್ರೆಗೆ ದಾಖಲಿಸಿದ್ದು, ಶನಿವಾರ ಮುಂಜಾನೆ ಮೃತಪಟ್ಟರು. ವರುಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಂಬರ್ ಪ್ಲೇಟ್ ಮುಚ್ಚಿ ಬೈಕ್ ಚಾಲನೆ: ಪ್ರಕರಣ ದಾಖಲು
ಮೈಸೂರು: ದ್ವಿಚಕ್ರ ವಾಹನದ ನಂಬರ್ ಪ್ಲೇಟ್‌ಗೆ ಟಿಶ್ಯೂ ಪೇಪರ್ ಮುಚ್ಚಿ ವಾಹನ ಚಲಾಯಿಸಿದ ಕಾರಣಕ್ಕಾಗಿ ಸಂಚಾರ ವಿಭಾಗದ ಪೊಲೀಸರು ವಾಹನ ಮಾಲೀಕರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.
ನಗರದ ಕೃಷ್ಣರಾಜ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಏಕಲವ್ಯ ವೃತ್ತದ ಬಳಿ ಬೈಕ್‌ನ ಹಿಂಬದಿಯ ನಂಬರ್ ಪ್ಲೇಟ್‌ನಲ್ಲಿ ನೋಂದಣಿ ಸಂಖ್ಯೆಯ ಅರ್ಧ ಭಾಗವನ್ನು ಮರೆಮಾಚಿ ಚಾಲನೆ ಮಾಡುತ್ತಿರುವ ಬಗ್ಗೆ ಪೊಲೀಸರಿಗೆ ದೂರು ಬಂದಿದ್ದು, ವಾಹನದ ವಿವರಗಳನ್ನು ಪರಿಶೀಲಿಸಿದಾಗ ಸಂಚಾರ ನಿಯಮ ಉಲ್ಲಂಘನೆ ವಿರುದ್ಧ ಪ್ರಕರಣಗಳಿಂದ ತಪ್ಪಿಸಿಕೊಳ್ಳಲು ಕೃತ್ಯ ಎಸಗಿದ್ದು ಕಂಡುಬಂದಿದೆ. ಮಾಲೀಕನ ವಿರುದ್ಧ ಲಕ್ಷ್ಮಿಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.