ADVERTISEMENT

ಹೊಸ ಮಾರುಕಟ್ಟೆಗಳಿಗೆ ಮಿಶ್ರ ಪ್ರತಿಕ್ರಿಯೆ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2020, 9:15 IST
Last Updated 2 ಏಪ್ರಿಲ್ 2020, 9:15 IST
ಲಲಿತಮಹಲ್ ಪ್ಯಾಲೇಸ್ ಮೈದಾನದಲ್ಲಿ ಬುಧವಾರ ತರಕಾರಿ ವ್ಯಾಪಾರ ನಡೆಯಿತು
ಲಲಿತಮಹಲ್ ಪ್ಯಾಲೇಸ್ ಮೈದಾನದಲ್ಲಿ ಬುಧವಾರ ತರಕಾರಿ ವ್ಯಾಪಾರ ನಡೆಯಿತು   

ಮೈಸೂರು: ತರಕಾರಿ ಮಾರುಕಟ್ಟೆಗಳಲ್ಲಿ ಜನಜಂಗುಳಿ ತಡೆಯಲು ಪಾಲಿಕೆಯು ಬುಧವಾರದಿಂದ ಜಾರಿಗೆ ಬಂದಿದ್ದ ಮಾರುಕಟ್ಟೆಗಳ ವಿಕೇಂದ್ರೀಕರಣ ವ್ಯವಸ್ಥೆಗೆ ವ್ಯಾಪಾರಿಗಳಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಲಲಿತಮಹಲ್ ಪ್ಯಾಲೇಸ್ ಮೈದಾನದಲ್ಲಿ 110 ಮಂದಿ ವ್ಯಾಪಾರಿಗಳು ಭಾಗವಹಿಸುವ ಮೂಲಕ ಹಾಗೂ ಹೆಚ್ಚಿನ ಖರೀದಿದಾರರು ಬರುವ ಮೂಲಕ ಈ ಹೊಸ ಮಾರುಕಟ್ಟೆ ಯಶಸ್ವಿಯಾಯಿತು.

ಬನ್ನಿಮಂಟಪದಲ್ಲಿ 30 ಮಂದಿ ಹಾಗೂ ವಿಜಯನಗರದ 2ನೇ ಹಂತದಲ್ಲಿ ಕೇವಲ ಒಬ್ಬರು ವ್ಯಾಪಾರಿ ಮಾತ್ರ ಇದ್ದರು. ಇನ್ನುಳಿದಂತೆ, ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಆವಣರದಲ್ಲಿ 120 ಮಂದಿ ವ್ಯಾಪಾರಸ್ಥರು ಭಾಗಿಯಾದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.