ರಂಗಾಯಣದ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಬಹುರೂಪಿ ನಾಟಕೋತ್ಸವದ ಕುರಿತು ಮಾಹಿತಿ ನೀಡಿದರು. ಜಂಟಿನಿರ್ದೇಶಕ ಮಲ್ಲಿಕಾರ್ಜುನಸ್ವಾಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿರ್ದೇಶಕ ಚನ್ನಪ್ಪ ಇದ್ದಾರೆ
ಮೈಸೂರು: ‘ಗಾಂಧೀಜಿ ಸಣ್ಣ ಸಣ್ಣ ಹುಡುಗಿಯರನ್ನು ಬೆತ್ತಲಾಗಿಸಿ, ತಾನೂ ಬೆತ್ತಲಾಗಿ ಅವರೊಂದಿಗೆ ಮಲಗಿಕೊಳ್ಳುತ್ತಿದ್ದುದಾಗಿ ಬರೆದುಕೊಂಡಿದ್ದಾರೆ. ಈಗ ಅವರು ಬದುಕಿದ್ದು, ಆ ಮಾತನ್ನು ಹೇಳಿದ್ದರೆ ಪೋಕ್ಸೋ ಪ್ರಕರಣ ದಾಖಲಾಗುತ್ತಿತ್ತು’ ಎಂದು ರಂಗಕರ್ಮಿ ಅಡ್ಡಂಡ ಸಿ.ಕಾರ್ಯಪ್ಪ ಹೇಳಿದರು.
ನಗರದಲ್ಲಿ ಶುಕ್ರವಾರ ತಮ್ಮ ‘ಸತ್ಯವನ್ನೇ ಹೇಳುತ್ತೇನೆ’ ನಾಟಕ ಕೃತಿ ಬಿಡುಗಡೆ ಕಾರ್ಯಕ್ರಮದ ಕೊನೆಗೆ ಮಾತನಾಡಿ, ‘ಗಾಂಧಿ ಒಬ್ಬ ಸಂತ. ಆತ ಸಂತನಾಗಿದ್ದೇನೆ ಎಂಬ ಕಾರಣಕ್ಕೆ ಹೆಣ್ಣು ಮಕ್ಕಳನ್ನು ಬೆತ್ತಲಾಗಿಸಿ, ತಾನೂ ಬೆತ್ತಲಾಗಬಹುದಿತ್ತೆ’ ಎಂದು ಪ್ರಶ್ನಿಸಿದರು.
‘60 ವರ್ಷಗಳಿಂದ ಮರೆಮಾಚಲಾಗಿದ್ದ ಇಂಥ ಸತ್ಯಗಳನ್ನು ಕೃತಿಯ ಮೂಲಕ ಹೊರತಂದಿದ್ದೇನೆ. ಯುವ ಪೀಳಿಗೆಗೆ ಸತ್ಯ ಏನು ಎಂಬುದನ್ನು ತೋರಿಸಿದ್ದೇನೆ. ಇದರಿಂದ ನನಗೆ ಯಾವುದೇ ಭಯ ಇಲ್ಲ. ಪ್ರಕರಣಗಳ ಬಗ್ಗೆ ತಲೆಕೆಡಿಸಿಕೊಳ್ಳಲ್ಲ. ಇದೆಲ್ಲಾ ಒಂದು ರೀತಿಯ ಆಟವಿದ್ದಂತೆ’ ಎಂದರು.
ಸಂಸದ ಯದುವೀರ್ ಕೃಷ್ಣದತ್ತ ಒಡೆಯರ್, ರಂಗಕರ್ಮಿ ಪ್ರಕಾಶ್ ಬೆಳವಾಡಿ, ಆದಿತ್ಯ ಆಸ್ಪತ್ರೆಯ ಅಧಿಕಾರಿ ಚಂದ್ರಶೇಖರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.