ADVERTISEMENT

ಡಿ. 9ರಂದು ಜಿಲ್ಲೆಯ ವಿವಿಧೆಡೆ ವಿದ್ಯುತ್‌ ವ್ಯತ್ಯಯ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2020, 5:15 IST
Last Updated 8 ಡಿಸೆಂಬರ್ 2020, 5:15 IST

ಮೈಸೂರು: ಸೆಸ್ಕ್‌ನ ವಿ.ವಿ.ಮೊಹಲ್ಲಾ ವಿಭಾಗ ವ್ಯಾಪ್ತಿಯ 66/11 ಕೆ.ವಿ. ಸಾಮರ್ಥ್ಯದ ಕೆಎಚ್‌ಬಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಡಿ.9ರ ಬುಧವಾರ ಬೆಳಿಗ್ಗೆ 10ರಿಂದ ಸಂಜೆ 5ಗಂಟೆಯವರೆಗೆ 3ನೇ ತ್ರೈಮಾಸಿಕ ಅವಧಿಯ ನಿರ್ವಹಣಾ ಕಾಮಗಾರಿ ಹಮ್ಮಿಕೊಳ್ಳಲಾಗಿದೆ.

ಇದರಿಂದ ಕೆಎಚ್‌ಬಿ ವಿದ್ಯುತ್ ವಿತರಣಾ ಕೇಂದ್ರ ವ್ಯಾಪ್ತಿಯ ವಿಜಯನಗರ 4ನೇ ಹಂತ, ಕೆಎಚ್‌ಬಿ ಕಾಲೊನಿ, ಹೂಟಗಳ್ಳಿ ಗ್ರಾಮ, ಕೆಆರ್‌ಎಸ್ ರಸ್ತೆ, ಆದಿತ್ಯ ಬಡಾವಣೆ, ಎಸ್ಆರ್‌ಎಸ್ ಕಾಲೊನಿ, ಕೂರ್ಗಳ್ಳಿ ಗ್ರಾಮ, ಬೆಳವಾಡಿ ಗ್ರಾಮ, ಎನ್‌ಎಚ್‌ಬಿ ಕಾಲೊನಿ, ಬೆಳವಾಡಿ ಕೈಗಾರಿಕಾ ಪ್ರದೇಶ, ಬಸವನಪುರ, ಶಾಹಿ ಗಾರ್ಮೆಂಟ್ಸ್, ಹೂಟಗಳ್ಳಿ ಕೈಗಾರಿಕಾ ಪ್ರದೇಶ, ಕೂರ್ಗಳ್ಳಿ ಕೈಗಾರಿಕಾ ಪ್ರದೇಶ.

ಗ್ರ್ಯಾಂಡ್ ಮೌರ್ಯ ಹೋಟೆಲ್, ರಿಲಯನ್ಸ್, ಮಾಸ್ ಫರ್ನಿಚರ್ಸ್, ಯಶಸ್ವಿನಿ ಕಲ್ಯಾಣ ಮಂಟಪ, ಸೌಪರ್ಣಿಕಾ ಅಪಾರ್ಟ್‍ಮೆಂಟ್, ಹಿನಕಲ್, ಎಸ್‌ವಿಇಐ ಕಾಲೇಜು ಸುತ್ತಮುತ್ತ, ಜಟ್ಟಿಹುಂಡಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಗೆ ಪೂರೈಕೆಯಾಗುವ ವಿದ್ಯುತ್‌ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

ADVERTISEMENT

66/11 ಕೆ.ವಿ.ಸಾಮರ್ಥ್ಯದ ಡಿ.ಎಂ.ಜಿ.ಹಳ್ಳಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ಅವಧಿಯ ನಿರ್ವಹಣಾ ಕಾಮಗಾರಿ ನಡೆಯಲಿದೆ. ಆದ್ದರಿಂದ ಈ ವ್ಯಾಪ್ತಿಯ ಡಿ.ಎಂ.ಜಿ.ಹಳ್ಳಿ, ಕಮರಹಳ್ಳಿ, ಮಾಣಿಕ್ಯಪುರ, ಡೊಡ್ಡಹಟ್ಟಿಹುಂಡಿ, ಮರಿಯ್ಯನಹುಂಡಿ, ಕಟ್ಟೆಹುಂಡಿ, ಶೆಟ್ಟಿನಾಯಕನಹಳ್ಳಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ವಿ.ವಿ.ಮೊಹಲ್ಲಾ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

66/11 ಏಗಿ ಎಫ್‌ಟಿಎಸ್ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ಅವಧಿಯ ನಿರ್ವಹಣಾ ಕಾಮಗಾರಿ ನಡೆಯಲಿದೆ.

ಅಶೋಕ ರಸ್ತೆ, ಲಷ್ಕರ್ ಮೊಹಲ್ಲಾ, ತಿಲಕ್ ನಗರ, ಮಿಷನ್ ಆಸ್ಪತ್ರೆ, ಗಾಂಧಿ ವೃತ್ತ, ಓಲ್ಡ್ ಬ್ಯಾಂಕ್ ರಸ್ತೆ, ಕೆ.ಟಿ.ಸ್ಟ್ರೀಟ್, ದೊಡ್ಡ ಒಕ್ಕಲಿಗರ ಬೀದಿ, ಇರ್ವಿನ್‌ ರಸ್ತೆ, ಸಯ್ಯಾಜಿರಾವ್ ರಸ್ತೆ, ಒಲಂಪಿಯಾ ಟಾಕಿಸ್, ಪುಲಕೇಶಿ ರಸ್ತೆ, ಕೈಲಾಸಪುರಂ, ಮಂಡಿಮೊಹಲ್ಲಾ, ರಾಜ್‍ಕಮಲ್ ಟಾಕಿಸ್ ಸುತ್ತಮುತ್ತ, ಶಿವರಾಂ ಪೇಟೆ, ಕೆ.ಆರ್.ಆಸ್ಪತ್ರೆ, ಬೋಟಿ ಬಜಾರ್, ಮಾರುಕಟ್ಟೆ, ಧನ್ವಂತರಿ ರಸ್ತೆ, ವೀರನಗೆರೆ.

ಶಿವಾಜಿ ರಸ್ತೆ, ಸೆಂಟ್ ಮೇರಿಸ್ ರಸ್ತೆ, ಗಾಂಧಿನಗರ, ಎ.ಜೆ.ಬ್ಲಾಕ್, ಗಣೇಶ್ ನಗರ, ರಾಜೇಂದ್ರನಗರ, ಕೆಸೆರೆ 1, 2, 3ನೇ ಹಂತ, ಸುಭಾಷ್‍ನಗರ, ಎನ್‌.ಆರ್‌.ಮೊಹಲ್ಲಾ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಎನ್‌.ಆರ್‌.ಮೊಹಲ್ಲಾ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.