ADVERTISEMENT

ವಿವಿಧೆಡೆ ವಿದ್ಯುತ್ ವ್ಯತ್ಯಯ ಇಂದು–ನಾಳೆ

​ಪ್ರಜಾವಾಣಿ ವಾರ್ತೆ
Published 21 ಜುಲೈ 2020, 16:42 IST
Last Updated 21 ಜುಲೈ 2020, 16:42 IST

ಮೈಸೂರು: ಸೆಸ್ಕ್‌ ವತಿಯಿಂದ ಕುವೆಂಪು ನಗರ ಉಪ ವಿಭಾಗದ 66/11 ಕೆ.ವಿ. ಜಿ.ಐ.ಎಸ್ ಕಲಾಮಂದಿರ ವಿತರಣಾ ಕೇಂದ್ರದಿಂದ ಹೊರಹೊಮ್ಮುವ 11 ಕೆ.ವಿ. ಕುಕ್ಕರಹಳ್ಳಿ ವಿದ್ಯುತ್ ಮಾರ್ಗದಲ್ಲಿ ಜುಲೈ 22ರಂದು ಭೂಗತ ಕೇಬಲ್ ಕಾಮಗಾರಿ ನಡೆಯಲಿದೆ.

ಬುಧವಾರ ಬೆಳಿಗ್ಗೆ 10ರಿಂದ ಸಂಜೆ 6ಗಂಟೆಯವರೆಗೆ ಕುಕ್ಕರಹಳ್ಳಿ, ಮಹಾಬೋಧಿ ಶಾಲೆ ಸುತ್ತಮುತ್ತ, ಸರಸ್ವತಿಪುರಂ 5ನೇ ಮುಖ್ಯ ರಸ್ತೆಯಿಂದ 14ನೇ ಮುಖ್ಯ ರಸ್ತೆಯವರೆಗಿನ ಜವರೇಗೌಡ ಪಾರ್ಕ್, ಸರಸ್ವತಿಪುರಂ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

66/11 ಕೆ.ವಿ ಬನ್ನಿಮಂಟಪ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಹೊಮ್ಮುವ 11 ಕೆ.ವಿ. ಹನುಮಂತನಗರ ಫೀಡರ್‌ನಲ್ಲಿ ಬುಧವಾರ ತುರ್ತು ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಬೆಳಿಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ಸೆಂಟ್ ಜೋಸೆಫ್ ಆಸ್ಪತ್ರೆ, ‘ಸಿ’ ಲೇಔಟ್, ಸೆಂಟ್ ಫಿಲೋಮಿನಾ ಹಾಸ್ಟೆಲ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.

ADVERTISEMENT

220/96/11 ಕೆ.ವಿ ಕಡಕೊಳ ವಿದ್ಯುತ್ ಸ್ವೀಕರಣಾ ಕೇಂದ್ರದಿಂದ ಹೊರಹೊಮ್ಮುವ 11 ಕೆ.ವಿ. ಟಾಟಾ ಮೈನ್ಸ್ ಫೀಡರ್‌ನಲ್ಲಿ ಜುಲೈ 23ರಂದು ತುರ್ತು ಕಾಮಗಾರಿ ಹಮ್ಮಿಕೊಳ್ಳಲಾಗಿದೆ.

ಗುರುವಾರ ಬೆಳಿಗ್ಗೆ 10ರಿಂದ ಸಂಜೆ 5.30ರವರೆಗೆ ಕಡಕೊಳ, ಸಿಂಧುವಳ್ಳಿ, ದಡದಹಳ್ಳಿ, ಚಿಕ್ಕಕಾನ್ಯ, ದೊಡ್ಡಕಾನ್ಯ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

66/11 ಕೆ.ವಿ ದೊಡ್ಡಕೆರೆ ಮೈದಾನ ವಿದ್ಯುತ್ ವಿತರಣಾ ಕೇಂದ್ರಗಳಿಂದ ಹೊರಹೊಮ್ಮುವ 11 ಕೆ.ವಿ. ಜೆ.ಸಿ.ಫೀಡರ್‌ನಲ್ಲಿ ತುರ್ತು ನಿರ್ವಹಣಾ ಕಾಮಗಾರಿಯನ್ನು ಹಮ್ಮಿಕೊಳ್ಳಲಾಗಿದೆ.

ಗುರುವಾರ ಬೆಳಿಗ್ಗೆ 10ರಿಂದ ಸಂಜೆ 5ಗಂಟೆಯವರೆಗೆ ಜೆ.ಸಿ.ನಗರ, ಕೆ.ಸಿ.ಬಡಾವಣೆ, ಇಂಡಸ್ ವ್ಯಾಲಿ, ಜೆಎಸ್ಎಸ್ ಆಯುರ್ವೇದಿಕ್ ಆಸ್ಪತ್ರೆ, ಲಲಿತಾದ್ರಿಪುರ, ಗಿರಿದರ್ಶಿನಿ ಬಡಾವಣೆ, ಲಲಿತಾದ್ರಿಪುರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಎನ್.ಆರ್.ಮೊಹಲ್ಲಾ ವಿಭಾಗದ ಕಾರ್ಯ ನಿರ್ವಾಹಕ ಎಂಜಿನಿಯರ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.