ಮೈಸೂರು: ನಗರದ ಇಟ್ಟಿಗೆಗೂಡು ಬಡಾವಣೆಯಲ್ಲಿ ಆಟವಾಡುವಾಗ ಬೀದಿ ದೀಪದ ಕೆಳಗೆ ಬಿದ್ದ ಚೆಂಡನ್ನು ಎತ್ತಿಕೊಳ್ಳಲು ಹೋದ ಬಾಲಕನಿಗೆ, ವಿದ್ಯುತ್ ಶಾಕ್ ತಗುಲಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಚಿನ್ನ–ಬೆಳ್ಳಿಯ ಕೆಲಸ ಮಾಡುವ ಸುಂದರ್ ಎಂಬುವರ ಪುತ್ರ ಕೌಶಿಕ್ (14) ಮೃತ ಬಾಲಕ.
ಬುಧವಾರ ರಾತ್ರಿ ಮಳೆ ಬಿಟ್ಟ ಬಳಿಕ ಆಟವಾಡುವಾಗ ಈ ಘಟನೆ ನಡೆದಿದೆ ಎಂದು ನಜರಬಾದ್ ಪೊಲೀಸರು ಮಾಹಿತಿ ನೀಡಿದ್ದಾರೆ.
ಗೃಹಿಣಿ ಆತ್ಮಹತ್ಯೆ
ಪ್ರಿಯಕರನೊಂದಿಗಿನ ಮನಸ್ತಾಪದಿಂದ ಗೃಹಿಣಿಯೊಬ್ಬರು ನಗರದ ಟಿ.ಕೆ.ಬಡಾವಣೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಶೀಲಾ (35) ಮೃತ ಗೃಹಿಣಿ. ಇವರ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇರೆಗೆ ವೆಂಕಟೇಶ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ ಎಂಬುದು ತಿಳಿದು ಬಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.