ADVERTISEMENT

ಶ್ರದ್ಧಾಭಕ್ತಿಗಳಿಂದ ರಾಘವೇಂದ್ರಸ್ವಾಮಿ ಆರಾಧನೆ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2019, 5:39 IST
Last Updated 18 ಆಗಸ್ಟ್ 2019, 5:39 IST
ಮೈಸೂರಿನ ಸುಬ್ಬರಾಯನ ಕೆರೆಯ ಶ್ರೀ ರಾಘವೇಂದ್ರಸ್ವಾಮಿಗಳ ಮಠದಲ್ಲಿ ರಾಘವೇಂದ್ರ ಸ್ವಾಮಿಯ 348ನೇ ವರ್ಷದ ಅರಾಧನಾ ಮಹೋತ್ಸವ ಅಂಗವಾಗಿ ಶನಿವಾರ ಭಕ್ತದಿಗಳು ರಾಯರ ದರ್ಶನ ಪಡೆದರು
ಮೈಸೂರಿನ ಸುಬ್ಬರಾಯನ ಕೆರೆಯ ಶ್ರೀ ರಾಘವೇಂದ್ರಸ್ವಾಮಿಗಳ ಮಠದಲ್ಲಿ ರಾಘವೇಂದ್ರ ಸ್ವಾಮಿಯ 348ನೇ ವರ್ಷದ ಅರಾಧನಾ ಮಹೋತ್ಸವ ಅಂಗವಾಗಿ ಶನಿವಾರ ಭಕ್ತದಿಗಳು ರಾಯರ ದರ್ಶನ ಪಡೆದರು   

ಮೈಸೂರು: ಮಂತ್ರಾಲಯದ ರಾಘವೇಂದ್ರ ಗುರುಸಾರ್ವಭೌಮರ 348ನೇ ಆರಾಧನಾ ಮಹೋತ್ಸವದಲ್ಲಿ ಶನಿವಾರ ಮಧ್ಯಾರಾಧನೆಯು ಶ್ರದ್ಧಾಭಕ್ತಿಗಳಿಂದ ನೆರವೇರಿತು.

ಇಲ್ಲಿನ ಸುಬ್ಬರಾಯರ ಕೆರೆಯ ರಾಘವೇಂದ್ರಸ್ವಾಮಿಗಳ ಮಠದಲ್ಲಿ ನಸುಕಿನಿಂದಲೇ ಪೂಜಾಕೈಂಕರ್ಯಗಳು ಆರಂಭವಾದವು. ಭಕ್ತರು ಸಾಲಿನಲ್ಲಿ ನಿಂತು ದರ್ಶನ ಪಡೆದರು.

ಜಯಲಕ್ಷ್ಮೀಪುರಂನ ರಾಘವೇಂದ್ರಸ್ವಾಮಿ ಸೇವಾ ಸಮಿತಿಯಲ್ಲಿ ಪೂಜೆ, ಪುನಸ್ಕಾರಗಳ ಜತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳೂ ನಡೆದವು. ವಿದುಷಿ ಸಂಗೀತಾ ಕಟ್ಟಿ ಕುಲಕರ್ಣಿ ಅವರ ‘ದಾಸವಾಣಿ’ ಕಾರ್ಯಕ್ರಮ ಭಕ್ತವೃಂದವನ್ನು ಸೂರೆಗೊಂಡಿತು.

ADVERTISEMENT

ಜೆ.ಪಿ.ನಗರದ ಪೇಜಾವರ ಅಧೋಕ್ಷಜ ಮಠದ ವಿಠ್ಠಲಧಾಮದಲ್ಲೂ ಅನೇಕ ಕಾರ್ಯಕ್ರಮಗಳು ನಡೆದವು. ಇವುಗಳಲ್ಲಿ ‘ಗುರುರಾಜವೈಭವ’ ಹಾಗೂ ‘ದಾಸ ವೈಭವ ಸಂಗೀತ ಕಾರ್ಯಕ್ರಮ’ಗಳು ಸೂಜಿಗಲ್ಲಿನಂತೆ ಸೆಳೆದವು.

ಸೋಮನಾಥನಗರದಲ್ಲಿ ಶ್ರೀ ಗುರುರಾಘವೇಂದ್ರ ಆರಾಧನಾ ಸಮಿತಿ ವತಿಯಿಂದ ರಾಘವೇಂದ್ರ ಅಷ್ಟಾಕ್ಷರ ಮಹಾಮಂತ್ರ ಹೋಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು.

ರಾಘವೇಂದ್ರ ಸ್ವಾಮಿಗಳ ಮಠಗಳನ್ನು ವಿವಿಧ ಬಗೆಗಳಲ್ಲಿ ಸಿಂಗಾರಗೊಳಿಸಲಾಗಿತ್ತು. ಹಲವೆಡೆ ಪ್ರಸಾದ ವಿನಿಯೋಗಗಳು ನಡೆದವು. ಭಾನುವಾರ ಉತ್ತರಾರಾಧನೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.