ADVERTISEMENT

ಮೈಸೂರು: ​​​​​​​ಮೈಲ್ಯಾಕ್ ಅಧ್ಯಕ್ಷರಾಗಿ ರಘು ಆರ್.ಕೌಟಿಲ್ಯ ಅಧಿಕಾರ ಸ್ವೀಕಾರ

​ಪ್ರಜಾವಾಣಿ ವಾರ್ತೆ
Published 29 ಜುಲೈ 2022, 13:58 IST
Last Updated 29 ಜುಲೈ 2022, 13:58 IST
ಮೈಸೂರು ಬಣ್ಣ ಮತ್ತು ಅರಗು ಕಾರ್ಖಾನೆ ( ಮೈಲ್ಯಾಕ್) ಅಧ್ಯಕ್ಷರಾಗಿ ರಘು ಆರ್.ಕೌಟಿಲ್ಯ ಶುಕ್ರವಾರ ಅಧಿಕಾರ ಸ್ವೀಕರಿಸಿದರು
ಮೈಸೂರು ಬಣ್ಣ ಮತ್ತು ಅರಗು ಕಾರ್ಖಾನೆ ( ಮೈಲ್ಯಾಕ್) ಅಧ್ಯಕ್ಷರಾಗಿ ರಘು ಆರ್.ಕೌಟಿಲ್ಯ ಶುಕ್ರವಾರ ಅಧಿಕಾರ ಸ್ವೀಕರಿಸಿದರು   

ಮೈಸೂರು: ಮೈಸೂರು ಬಣ್ಣ ಮತ್ತು ಅರಗು ಕಾರ್ಖಾನೆಯ (ಮೈಲ್ಯಾಕ್)ಅಧ್ಯಕ್ಷರಾಗಿ ರಘು ಆರ್.ಕೌಟಿಲ್ಯ ಶುಕ್ರವಾರ ಅಧಿಕಾರ ಸ್ವೀಕರಿಸಿದರು.

ತಿಲಕ್‌ ನಗರದಲ್ಲಿರುವ ಕಚೇರಿಯಲ್ಲಿ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಫೋಟೊಗೆ ಪುಷ್ಪ ನಮನ ಸಲ್ಲಿಸಿದರು.

ಬಳಿಕ ಮಾತನಾಡಿ, ‘ಇದೊಂದು ಚಾರಿತ್ರಿಕ ಸಂಸ್ಥೆಯಾಗಿದೆ. ಇದನ್ನು ನಡೆಸುವ ಜವಾಬ್ದಾರಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನನಗೆ ನೀಡಿದ್ದಾರೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಮತ್ತಷ್ಟು ಹೆಸರು ಮಾಡುವಂತೆ ಕಾರ್ಖಾನೆಯನ್ನು ಬೆಳೆಸುವ ಆಸೆ ಇದೆ. ಬಿಜೆ‍ಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ‍ಪ್ರಕರಣದ ಹಿನ್ನೆಲೆಯಲ್ಲಿ ಸರಳವಾಗಿ ಕಾರ್ಯಕ್ರಮ ನಡೆಸಲಾಯಿತು’ ಎಂದರು.

ADVERTISEMENT

‘ದೇಶದೊಂದಿಗೆ, ಜಗತ್ತಿನ ಅನೇಕ ರಾಷ್ಟ್ರಗಳಲ್ಲಿ ನಡೆಯುವ ಚುನಾವಣೆಗೆ ಅಳಿಸಲಾಗದ ಶಾಯಿಯನ್ನು ಇಲ್ಲಿಂದ ಕಳುಹಿಸಲಾಗುತ್ತದೆ. ಮತ್ತಷ್ಟು ಯೋಜನೆಗಳನ್ನು ರೂಪಿಸಲು ಅಧಿಕಾರಿಗಳೊಂದಿಗೆ ಚರ್ಚಿಸುತ್ತೇನೆ’ ಎಂದು ತಿಳಿಸಿದರು.

ವ್ಯವಸ್ಥಾಪಕ ನಿರ್ದೇಶಕ ಜಿ.ಕುಮಾರಸ್ವಾಮಿ, ಪ್ರಧಾನ ವ್ಯವಸ್ಥಾಪಕ ಹರಕುಮಾರ್, ವಾಣಿಜ್ಯ ವ್ಯವಸ್ಥಾಪಕ ಅಪ್ಪಣ್ಣ ಹಾಜರಿದ್ದರು.

ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರಕ್ಕೆಮಿರ್ಲೆ ಶ್ರೀನಿವಾಸ್‌ಗೌಡ
ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ 20ನೇ ಅಧ್ಯಕ್ಷರಾಗಿ ಮಿರ್ಲೆ ಶ್ರೀನಿವಾಸ್‌ಗೌಡ ಶುಕ್ರವಾರ ಅಧಿಕಾರ ಸ್ವೀಕರಿಸಿದರು.

‘ಪಕ್ಷ ನಿಷ್ಠೆ ಪರಿಗಣಿಸಿ ನನಗೆ ಅವಕಾಶ ನೀಡಲಾಗಿದೆ. ಇದರಿಂದ ಖುಷಿಯಾಗಿದೆ. ಈಗಾಗಲೇ ಮೈಸೂರು ಹಾತ್ ಹೆಸರಿನಲ್ಲಿ ₹3 ಕೋಟಿ ಅಂದಾಜು ವೆಚ್ಚದ ಕಾಮಗಾರಿಗೆ ಚಾಲನೆ ಸಿಕ್ಕಿದೆ. ಅದನ್ನು ಜಾರಿಗೊಳಿಸುವ ಜತೆಗೆ ಮತ್ತಷ್ಟು ಅಭಿವೃದ್ಧಿಗೆ ಕ್ರಮ ವಹಿಸಲಾಗುವುದು. ವರ್ಷಪೂರ್ತಿ ವಸ್ತುಪ್ರದರ್ಶನ ನಡೆಸಲು ಚರ್ಚಿಸಲಾಗುವುದು’ ಎಂದರು.

ಮೈಸೂರಿನಲ್ಲಿ ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷರಾಗಿ ಶುಕ್ರವಾರ ಅಧಿಕಾರ ಸ್ವೀಕರಿಸಿದ ಮಿರ್ಲೆ ಶ್ರೀನಿವಾಸಗೌಡ ಅವರನ್ನು ನಿರ್ಗಮಿತ ಅಧ್ಯಕ್ಷ ಹೇಮಂತ್‌ಕುಮಾರ್‌ ಅಭಿನಂದಿಸಿದರು

ಅವರನ್ನು ಕಾರ್ಯನಿರ್ವಹಣಾಧಿಕಾರಿ ರುದ್ರೇಶ್ ಬರಮಾಡಿಕೊಂಡರು. ನಿರ್ಗಮಿತ ಅಧ್ಯಕ್ಷ ಎ.ಹೇಮಂತ್‌ಕುಮಾರ್‌ ಗೌಡ ಅಭಿನಂದಿಸಿದರು. ಬಿಜೆಪಿ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷೆ ಮಂಗಳಾ ಸೋಮಶೇಖರ್, ವಕ್ತಾರ ಕೆ.ಮಹೇಶ್ ಹಾಜರಿದ್ದರು.

ಅಧಿಕಾರ ಸ್ವೀಕಾರ ಹಿನ್ನೆಲೆಯಲ್ಲಿ ದಸರಾ ವಸ್ತುಪ್ರದರ್ಶನ ಆವರಣದಲ್ಲಿ ಶುಭಾಶಯ ಕೋರುವ ಕಟೌಟ್‌ಗಳು ರಾರಾಜಿಸಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.