ADVERTISEMENT

ಮೈಸೂರಲ್ಲಿ ರೈಲು ಗಾಲಿ ತಯಾರಿ

ರೈಲ್ವೆ ಕಾರ್ಯಾಗಾರ: 160 ಕಿ.ಮೀ ವೇಗ ಸಾಮರ್ಥ್ಯದ ಚಕ್ರಗಳು

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2020, 19:24 IST
Last Updated 30 ಆಗಸ್ಟ್ 2020, 19:24 IST
ಹೈಸ್ಪೀಡ್‌ ರೈಲು ಗಾಲಿಗಳು
ಹೈಸ್ಪೀಡ್‌ ರೈಲು ಗಾಲಿಗಳು   

ಮೈಸೂರು: ಮೈಸೂರಿನ ಅಶೋಕಪುರಂನಲ್ಲಿರುವ ರೈಲ್ವೆ ಕಾರ್ಯಾಗಾರದಲ್ಲಿ ಹೈಸ್ಪೀಡ್‌ ಮೆಮು ರೈಲು ಗಾಲಿ ತಯಾರಿಸಲಾಗುತ್ತಿದ್ದು, ದೇಶದ ಕಾರ್ಯಾಗಾರಗಳಲ್ಲೇ ಮೊದಲ ಪ್ರಯತ್ನ ಇದಾಗಿದೆ.

ಭಾರತೀಯ ರೈಲ್ವೆಯ ನೈರುತ್ಯ ರೈಲ್ವೆ ವಿಭಾಗದ ನಿಗಾದಲ್ಲಿ ಇಲ್ಲಿನ ವ್ಹೀಲ್‌ಶಾಪ್‌ನಲ್ಲಿ ಇಂಥ ಆರು ಜೊತೆ ಗಾಲಿಗಳನ್ನು ಮೊದಲ ಹಂತದಲ್ಲಿ ಸಿದ್ಧಪಡಿಸಲಾಗಿದೆ. ಅವುಗಳನ್ನು ಈಗಾಗಲೇ ಭಾರತ್‌ ಅರ್ಥ್‌ ಮೂವರ್ಸ್‌ ಲಿಮಿಟೆಡ್‌ಗೆ (ಬೆಮಲ್‌) ರವಾನಿಸಲಾಗಿದೆ.

ರೈಲ್ವೆ ಮಂಡಳಿ ಸಲ್ಲಿಸಿರುವ ಬೇಡಿಕೆ ಮೇರೆಗೆ ಬೆಮಲ್‌ ಅಭಿವೃದ್ಧಿಪಡಿಸುತ್ತಿರುವ ಎಂಟು ಕೋಚ್‌ಗಳ ಮೆಮು ರೈಲಿಗೆ ಈ ಗಾಲಿಗಳನ್ನು ಅಳವಡಿಸಲಾಗುತ್ತದೆ. ಈ ರೈಲು ಗಾಜಿಯಾಬಾದ್‌ ಮತ್ತು ನವದೆಹಲಿ ವಿಭಾಗದಲ್ಲಿ ಸಂಚರಿಸಲಿದೆ.

ADVERTISEMENT

‘ಈ ಗಾಲಿಗಳನ್ನು ಬಳಸಿ ಗಂಟೆಗೆ 160 ಕಿ.ಮೀ. ವೇಗದಲ್ಲಿ ಮೆಮು ರೈಲು ಚಲಿಸಲು ಸಾಧ್ಯವಾಗಲಿದೆ. ಈ ಉದ್ದೇಶದಿಂದ ಈ ಸಾಮರ್ಥ್ಯದ ಗಾಲಿಗಳನ್ನು ತಯಾರಿಸಲಾಗುತ್ತಿದೆ’ ಎಂದು ಕಾರ್ಯಾಗಾರದ ಮುಖ್ಯ ವ್ಯವಸ್ಥಾಪಕ ಪಿ.ಶ್ರೀನಿವಾಸು ‘ಪ್ರಜಾವಾಣಿ’ಗೆ ತಿಳಿಸಿದರು.

ಗಾಲಿಗಳ ತಯಾರಿಕೆಗಾಗಿ ₹ 2.4 ಕೋಟಿ ಮೊತ್ತದ ಒಪ್ಪಂದ ಮಾಡಿಕೊಳ್ಳಲಾಗಿದೆ. ಅಗತ್ಯವಾದ ಎಲ್ಲಾ ಸಾಮಗ್ರಿಗಳನ್ನು ಬೆಮಲ್‌ ಪೂರೈಸಲಿದೆ.

225 ಟ್ರೈಲರ್‌ ಕೋಚ್‌ ಬೋಗಿಗಳಿಗೆ 900 ಜೊತೆ ಟ್ರೈಲರ್‌ ಕೋಚ್‌ ಗಾಲಿಗಳು ಹಾಗೂ 75 ಮೋಟಾರ್‌ ಕೋಚ್‌ ಬೋಗಿಗಳಿಗೆ 300 ಜೊತೆ ಮೋಟಾರ್‌ ಕೋಚ್‌ ಗಾಲಿಗಳಿಗೆ ಬೆಮಲ್‌ ಬೇಡಿಕೆ ಸಲ್ಲಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.