ADVERTISEMENT

ಕಾಳಿದಾಸ ಬಳಕೆದಾರರ ಸಹಕಾರ ಸಂಘ: ಅಧ್ಯಕ್ಷರಾಗಿ ಎಚ್.ಸಿ. ರಾಜು ಆಯ್ಕೆ

​ಪ್ರಜಾವಾಣಿ ವಾರ್ತೆ
Published 30 ಜೂನ್ 2022, 14:59 IST
Last Updated 30 ಜೂನ್ 2022, 14:59 IST
ಹಿನ್‌ಕಲ್‌ನ ಕಾಳಿದಾಸ ಬಳಕೆದಾರರ ಸಹಕಾರ ಸಂಘಕ್ಕೆ ಗುರುವಾರ ನಡೆದ ಚುನಾವಣೆಯಲ್ಲಿ  ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದಆಯ್ಕೆಯಾದ ಎಚ್.ಸಿ. ರಾಜು ಮತ್ತು ಧರ್ಮ ಅವರನ್ನು ನಿರ್ದೇಶಕರು ಅಭಿನಂದಿಸಿದರು
ಹಿನ್‌ಕಲ್‌ನ ಕಾಳಿದಾಸ ಬಳಕೆದಾರರ ಸಹಕಾರ ಸಂಘಕ್ಕೆ ಗುರುವಾರ ನಡೆದ ಚುನಾವಣೆಯಲ್ಲಿ  ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದಆಯ್ಕೆಯಾದ ಎಚ್.ಸಿ. ರಾಜು ಮತ್ತು ಧರ್ಮ ಅವರನ್ನು ನಿರ್ದೇಶಕರು ಅಭಿನಂದಿಸಿದರು   

ಮೈಸೂರು: ತಾಲ್ಲೂಕಿನ ಹಿನ್‌ಕಲ್‌ನ ಕಾಳಿದಾಸ ಬಳಕೆದಾರರ ಸಹಕಾರ ಸಂಘಕ್ಕೆ ಗುರುವಾರ ನಡೆದ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಎಚ್.ಸಿ. ರಾಜು ಮತ್ತು ಉಪಾಧ್ಯಕ್ಷರಾಗಿ ಧರ್ಮ ಅವಿರೋಧವಾಗಿ ಆಯ್ಕೆಯಾದರು.

ಬಳಿಕ ಮಾತನಾಡಿದ ರಾಜು, ‘ಸಂಘದಲ್ಲಿ 13 ಮಂದಿ ನಿರ್ದೇಶಕರಿದ್ದು, 160 ಸದಸ್ಯರಿದ್ದಾರೆ. ಸಾಮಾಜಿಕ ಕಳಕಳಿಯಿಂದ ಕೆಲಸ ಮಾಡಲು ನಿರ್ಧರಿಸಲಾಗಿದೆ. ಜನರಿಗೆ ಕೈಗೆಟುಕುವ ದರದಲ್ಲಿ ಆಹಾರ ಧಾನ್ಯ ವಿತರಣೆ, ಸಾಲ ಸೌಲಭ್ಯ ಒದಗಿಸುವುದು ಮೊದಲಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು’ ಎಂದು ತಿಳಿಸಿದರು.

ನಿರ್ದೇಶಕರಾದ ಜಿ.ಕುಮಾರ್, ನಾಗರಾಜು, ಸ್ವಾಮಿ, ಮಂಗಳ, ಕೆ.ಕವಿತಾ, ಎಸ್. ಕುಮಾರ, ಜಯಮ್ಮ, ಸುಶೀಲಾ, ಯಶೋದಾ, ಪ್ರಕಾಶ, ಎನ್. ಪ್ರಶಾಂತ್ ಹಾಜರಿದ್ದರು.

ADVERTISEMENT

ಚುನಾವಣಾಧಿಕಾರಿಯಾಗಿ ವಿಮಲ್‌ಕುಮಾರ್ ಕಾರ್ಯನಿರ್ವಹಿಸಿದರು.

ಆಯ್ಕೆಯಾದ ಅಧ್ಯಕ್ಷ, ಉಪಾಧ್ಯಕ್ಷರನ್ನು ಅಭಿನಂದಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.