ADVERTISEMENT

ರಾಮಾಯಣದಿಂದ ಬದುಕಿನ ಮೌಲ್ಯ: ಮೂಗೂರು ಕುಮಾರಸ್ವಾಮಿ

ವಾಲ್ಮೀಕಿ ಜಯಂತ್ಯುತ್ಸವದಲ್ಲಿ ಉಪನ್ಯಾಸಕ ಮೂಗೂರು ಕುಮಾರಸ್ವಾಮಿ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2025, 5:08 IST
Last Updated 8 ಅಕ್ಟೋಬರ್ 2025, 5:08 IST
ತಿ.ನರಸೀಪುರ‌ದ ಆಡಳಿತ ಸೌಧದ ಮುಂಭಾಗದಲ್ಲಿ ಮಂಗಳವಾರ ನಡೆದ ವಾಲ್ಮೀಕಿ ಜಯಂತ್ಯುತ್ಸವದಲ್ಲಿ ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚಾನೆ ನೆರವೇರಿಸಲಾಯಿತು
ತಿ.ನರಸೀಪುರ‌ದ ಆಡಳಿತ ಸೌಧದ ಮುಂಭಾಗದಲ್ಲಿ ಮಂಗಳವಾರ ನಡೆದ ವಾಲ್ಮೀಕಿ ಜಯಂತ್ಯುತ್ಸವದಲ್ಲಿ ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚಾನೆ ನೆರವೇರಿಸಲಾಯಿತು   

ತಿ.ನರಸೀಪುರ: ‘ರಾಮಾಯಣದ ಮೂಲಕ ಜಗತ್ತಿಗೆ ಶ್ರೀರಾಮಚಂದ್ರರನ್ನು‌ ಪರಿಚಯಿಸಿದ ಕೀರ್ತಿ ಮಹರ್ಷಿ ವಾಲ್ಮೀಕಿ ಅವರಿಗೆ ಸಲ್ಲುತ್ತದೆ’ ಎಂದು ಉಪನ್ಯಾಸಕ ಮೂಗೂರು ಕುಮಾರಸ್ವಾಮಿ ಹೇಳಿದರು.

ತಾಲ್ಲೂಕು ಆಡಳಿತ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ತಾಲೂಕು ನಾಯಕರ ಸಂಘದ ಸಂಯುಕ್ತಾಶ್ರಯದಲ್ಲಿ ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ಮಂಗಳವಾರ ನಡೆದ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವದ ಪ್ರಧಾನ ಭಾಷಣದಲ್ಲಿ ಅವರು ಮಾತನಾಡಿದರು.

‘ಆದಿಕವಿ ವಾಲ್ಮೀಕಿ ಅವರು ರಾಮಾಯಣದ ಮೂಲಕ ಬದುಕಿನ ಹಲವು ಮೌಲ್ಯಗಳನ್ನು ನೀಡಿದ್ದಾರೆ. ರಾಮಾಯಣ ಭಾರತೀಯ ಮಹಾಕಾವ್ಯವನ್ನು ಭಾರತಕ್ಕೆ ಮಾತ್ರವಲ್ಲದೇ ವಿಶ್ವಕ್ಕೆ ನೀಡಿದ ಬಹು ದೊಡ್ಡ ಸಾಹಿತ್ಯ’ ಎಂದು ಅಭಿಪ್ರಾಯಪಟ್ಟರು.

ADVERTISEMENT

ತಾಲ್ಲೂಕು ಆಡಳಿತ, ನಾಯಕರ ಸಂಘ ಹಾಗೂ ಪರಿಶಿಷ್ಟ ಪಂಗಡ ಕಲ್ಯಾಣ ಇಲಾಖೆಯಿಂದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಕಾವೇರಿ ಗ್ರಾಮೀಣ ಬ್ಯಾಂಕಿನ ನಿವೃತ್ತ ವ್ಯವಸ್ಥಾಪಕ ಶ್ರೀರಾಮಪುರ ಮಹದೇವಣ್ಣ, ಪೈಲ್ವಾನ್ ಕುಮಾರ, ಬೂದಹಳ್ಳಿ ಸಿದ್ದರಾಜು, ಸೋಸಲೆ ಇಂದ್ರೇಶ್ ಹಾಗು ತಲಕಾಡಿನ ರೈತ ಮುಖಂಡ ದಿನೇಶ್ ಅವರನ್ನು ಸನ್ಮಾನಿಸಿತು.

ಕಾರ್ಯಕ್ರಮಕ್ಕೆ ಮುನ್ನಾ ಪಟ್ಟಣದ ಗುಂಜಾ ನರಸಿಂಹಸ್ವಾಮಿ ದೇವಸ್ಥಾನದ ಮುಂಭಾಗ ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರ ಹಾಗೂ ವಿವಿಧ ಸ್ಥಬ್ದ ಚಿತ್ರಗಳ ಮೆರವಣಿಗೆಗೆ ತಹಸೀಲ್ದಾರ್ ಟಿ.ಜಿ.ಸುರೇಶಾಚಾರ್ ಅವರು ಚಾಲನೆ ನೀಡಿದರು.

ವಿಶ್ವಕರ್ಮ ರಸ್ತೆ, ಭಗವಾನ್ ಚಿತ್ರಮಂದಿರ ವೃತ್ತ, ಲಿಂಕ್ ರಸ್ತೆ, ಕಾಲೇಜು ರಸ್ತೆ ಮೂಲಕ ಸಂಚರಿಸಿ ತಾಲ್ಲೂಕು ಕಚೇರಿ ತಲುಪಿತು. ವಿವಿಧ ಹೂವುಗಳಿಂದ ಅಲಂಕರಿಸಲಾಗಿದ್ದ ಬೆಳ್ಳಿಪಲ್ಲಕ್ಕಿಯಲ್ಲಿ ವಾಲ್ಮೀಕಿ ಭಾವಚಿತ್ರವನ್ನು ಇಟ್ಟು ವಿವಿಧ ಸಾಂಸ್ಕೃತಿಕ ಕಲಾ ತಂಡಗಳೊಂದಿಗೆ, ವೀರಭದ್ರ ಕುಣಿತ, ಬೊಂಬೆ ಕುಣಿತ, ಡೊಳ್ಳು, ನಗಾರಿಯೊಂದಿಗೆ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಸ್ತಬ್ಧ ಚಿತ್ರಗಳ ಮೆರವಣಿಗೆ ಗಮನ ಸೆಳೆಯಿತು.

ತಹಶೀಲ್ದಾರ್ ಟಿ.ಜೆ.ಸುರೇಶಾಚಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಶಿವಮೂರ್ತಿ, ತಾಲ್ಲೂಕು ಪಂಚಾಯಿತಿ ಇಒ ಪಿ.ಎಸ್.ಅನಂತರಾಜು, ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿ ಎಂ.ಎನ್.ಕೋಮಲ, ಗ್ರೇಡ್– 2 ತಹಶೀಲ್ದಾರ್ ರಾಜಾಕಾಂತ್, ತಾಲ್ಲೂಕು ನಾಯಕರ ಸಂಘದ ಗೌರವಾಧ್ಯಕ್ಷ ಮಂಜುನಾಥನ್, ಪ್ರಧಾನ ಕಾರ್ಯದರ್ಶಿ ಆಲಗೂಡು ನಾಗರಾಜು, ಖಜಾಂಚಿ ಗೋವಿಂದರಾಜು, ಹೊನ್ನನಾಯಕ, ಕೆ.ಸಿ.ಲೋಕೇಶ್ ನಾಯಕ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ವಿ.ಶಿವಶಂಕರ ಮೂರ್ತಿ, ಮುಖಂಡರಾದ ನರಸಿಂಹ ಮಾದನಾಯಕ, ಹೆಮ್ಮಿಗೆ ಹೊನ್ನನಾಯಕ, ಸುಂದರನಾಯಕ, ಮೂಗೂರು ಸಾಗರ್, ಎ.ಜೆ.ವೆಂಕಟೇಶ, ಅಂಬೇಡ್ಕರ್ ಅಭಿವೃದ್ಧಿ ಸಂಘದ ಅಧ್ಯಕ್ಷ ಕರೋಹಟ್ಟಿ ಮಹದೇವಯ್ಯ, ಗಣೇಶ್,ರಾಮಲಿಂಗಯ್ಯ, ಪ್ರಸನ್ನ, ಮೂಗೂರು ಸಿದ್ದರಾಜು, ಪುಟ್ಟಯ್ಯ, ಮಲಿಯೂರು ಶಂಕರ್, ಬನ್ನೂರು ಪುರಸಭಾ ಸದಸ್ಯರಾದ ಶಿವಣ್ಣ, ಪ್ರಕಾಶ್, ಶಿವಕುಮಾರ್, ಸಿದ್ದರಾಜು, ಬಸವರಾಜು, ತಾಲ್ಲೂಕಿನ ವಿವಿಧ ಇಲಾಖಾಧಿಕಾರಿಗಳು ಹಾಜರಿದ್ದರು.

,

ತಿ. ನರಸೀಪುರ‌ ಪಟ್ಟಣದ ಗುಂಜಾನರಸಿಂಹಸ್ವಾಮಿ ದೇವಾಲಯ ದ ಮುಂಭಾಗದಲ್ಲಿ ವಾಲ್ಮೀಕಿ ಜಯಂತೋತ್ಸವ ಮೆರವಣಿಗೆಗೆ ತಹಶೀಲ್ದಾರ್ ಸುರೇಶ ಆಚಾರ್ ಮಂಗಳವಾರ ಚಾಲನೆ ನೀಡಿದರು. ಈ ವೇಳೆ ನಾಯಕ ಸಂಘಟನೆಗಳ ಪ್ರಮುಖರು ಸೇರಿದಂತೆವಿವಿಧ ಸಮಾಜದ ಮುಖಂಡರು ಅಧಿಕಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.