ಮೈಸೂರು: ಇಷ್ಟು ದಿನ ಹಕ್ಕಿಗಳ ಕಲರವವಷ್ಟೇ ಕೇಳುತ್ತಿದ್ದ ಮಂಡ್ಯ ಜಿಲ್ಲೆಯ ರಂಗನತಿಟ್ಟು ಪಕ್ಷಿಧಾಮದಲ್ಲೀಗ ಕಲ್ಯಾಣ ಕರ್ನಾಟಕ ಭಾಗದ ನದಿಗಳ ಹೆಸರು ಕೂಡ ಅನುರಣಿಸುತ್ತಿದೆ.
ವಿಶ್ವವಿಖ್ಯಾತ ಪಕ್ಷಿಧಾಮಕ್ಕೆ ಹೊಸದಾಗಿ ಸೇರ್ಪಡೆಯಾಗಿರುವ 3 ವಿಹಾರ ದೋಣಿಗಳಿಗೆ
‘ಮಾಂಜ್ರಾ’, ‘ಕಾರಂಜಾ’ ಮತ್ತು ‘ಗೋದಾವರಿ’ ನದಿಗಳ ಹೆಸರಿಡಲಾಗಿದೆ. ಬುಧವಾರ ನಗರಕ್ಕೆ ಭೇಟಿ ನೀಡಿದ್ದ ಅರಣ್ಯ, ಜೀವವಿಜ್ಞಾನ ಮತ್ತು ಪರಿಸರ ಸಚಿವ ಈಶ್ವರ ಬಿ. ಖಂಡ್ರೆ ಅವರು ದೋಣಿಗಳ ಹೆಸರುಗಳನ್ನು ಅನಾವರಣಗೊಳಿಸಿದರು.
ಕಳೆದ ನವೆಂಬರ್‌ನಲ್ಲಿ ರಂಗನತಿಟ್ಟಿಗೆ ಭೇಟಿ ನೀಡಿದ್ದ ವೇಳೆ ನೂತನ ಮೂರು ದೋಣಿಗಳ ಸೇವೆ ಉದ್ಘಾಟಿಸಿದ ಬಳಿಕ, ಅವುಗಳಿಗೆ ಕಲ್ಯಾಣ ಕರ್ನಾಟಕದ ನದಿಗಳ ಹೆಸರು ಇಡುವಂತೆ ಅಧಿಕಾರಿಗಳಿಗ ಸಲಹೆ ನೀಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.