ADVERTISEMENT

ಎಚ್.ಡಿ.ಕೋಟೆ | ಕೇರಳಕ್ಕೆ ಸಾಗಣೆ ಮಾಡುತ್ತಿದ್ದ 23 ಜಾನುವಾರು ರಕ್ಷಣೆ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2024, 14:03 IST
Last Updated 29 ಸೆಪ್ಟೆಂಬರ್ 2024, 14:03 IST
ಎಚ್.ಡಿ.ಕೋಟೆ ತಾಲ್ಲೂಕಿನ ಬಂಡೀಪುರ ಹುಲಿ ಸಂರಕ್ಷಿತ ವ್ಯಾಪ್ತಿಯ ಗುಂಡ್ರೆ ವಲಯದ ಆನೆಕಾಲು ದಾರಿಗಳ ಮೂಲಕ ಅಕ್ರಮವಾಗಿ ಕೇರಳ ರಾಜ್ಯಕ್ಕೆ ಸಾಗಿಸುತ್ತಿದ್ದ 23 ದನಗಳನ್ನು ಈಚೆಗೆ ರಕ್ಷಿಸಲಾಗಿದೆ
ಎಚ್.ಡಿ.ಕೋಟೆ ತಾಲ್ಲೂಕಿನ ಬಂಡೀಪುರ ಹುಲಿ ಸಂರಕ್ಷಿತ ವ್ಯಾಪ್ತಿಯ ಗುಂಡ್ರೆ ವಲಯದ ಆನೆಕಾಲು ದಾರಿಗಳ ಮೂಲಕ ಅಕ್ರಮವಾಗಿ ಕೇರಳ ರಾಜ್ಯಕ್ಕೆ ಸಾಗಿಸುತ್ತಿದ್ದ 23 ದನಗಳನ್ನು ಈಚೆಗೆ ರಕ್ಷಿಸಲಾಗಿದೆ   

ಎಚ್.ಡಿ.ಕೋಟೆ: ತಾಲ್ಲೂಕಿನ ಬಂಡೀಪುರ ಹುಲಿ ಸಂರಕ್ಷಿತ ವ್ಯಾಪ್ತಿಯ ಗುಂಡ್ರೆ ವಲಯದ ಆನೆಕಾಲು ದಾರಿಗಳ ಮೂಲಕ ಅಕ್ರಮವಾಗಿ ಕೇರಳ ರಾಜ್ಯಕ್ಕೆ ಸಾಗಣೆ ಮಾಡುತ್ತಿದ್ದ 23 ಜಾನುವಾರುಗಳನ್ನು ರಕ್ಷಿಸಲಾಗಿದೆ.

ದನಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.

ಗುಂಡ್ರೆ ವಲಯದ ಉಪವಲಯ ಅರಣ್ಯಾಧಿಕಾರಿ ಮಧುನಾಯ್ಕ, ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಭಾಕರನ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎ.ವಿ.ಸತೀಶ್ ಹಾಗೂ ಸಿಬ್ಬಂದಿ ಮಹೇಶ್, ಬಿ.ಸಿ ರಾಜೇಶ್, ರಾಜಣ್ಣ, ಸಿಂಗರಾಜು, ಶ್ರೀಜೀತ್  ಅವರನ್ನು ಜಾನುವಾರು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.

ADVERTISEMENT

 ಮೈಸೂರಿನ ಪಿಂಜರ್‌ಪೋಲ್‌ಗೆ ಸುರಕ್ಷತೆಗಾಗಿ 23 ಜಾನುವಾರುಗಳನ್ನು ಹಸ್ತಾಂತರಿಸಲಾಗಿದೆ ಎಂದು ಗುಂಡ್ರೆ ವಲಯ ಅರಣ್ಯಾಧಿಕಾರಿ ಬಿ.ಬಿ.ಅಮೃತೇಶ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.