ADVERTISEMENT

ಮಣ್ಣುಮುಕ್ಕ ಹಾವಿನ ಕಳ್ಳಸಾಗಣೆ; ಐವರ ಬಂಧನ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2020, 8:44 IST
Last Updated 30 ಅಕ್ಟೋಬರ್ 2020, 8:44 IST
ಆರೋಪಿಗಳಿಂದ ವಶಪಡಿಸಿಕೊಂಡ ಮಣ್ಣುಮುಕ್ಕ ಹಾವು (2 ತಲೆ ಹಾವು)
ಆರೋಪಿಗಳಿಂದ ವಶಪಡಿಸಿಕೊಂಡ ಮಣ್ಣುಮುಕ್ಕ ಹಾವು (2 ತಲೆ ಹಾವು)   

ಮೈಸೂರು: ಬೆಂಗಳೂರಿನಿಂದ ಮೈಸೂರಿಗೆ ಬರುತ್ತಿದ್ದ ಕಾರಿನ ಮೇಲೆ ಬುಧವಾರ ರಾತ್ರಿ ದಾಳಿ ನಡೆಸಿದ ಅರಣ್ಯ ಸಂಚಾರ ದಳದ ಅಧಿಕಾರಿಗಳು 3 ಅಡಿ ಉದ್ದದ ಮಣ್ಣುಮುಕ್ಕ ಹಾವನ್ನು (2 ತಲೆ ಹಾವು) ರಕ್ಷಿಸಿ, ಐವರನ್ನು ಬಂಧಿಸಿದ್ದಾರೆ.

ದೊಡ್ಡಯ್ಯ (45), ಹೇಮಂತ್ (19), ಯೋಗೇಶ್ (24), ರವಿ (35) ಹಾಗೂ ಭರಮೇಗೌಡ (23) ಬಂಧಿತರು.

‘ಈ ಹಾವಿನಿಂದ ಅದೃಷ್ಟ ಬರುತ್ತದೆ ಎಂದು ನಂಬಿಸಿ ಮಾರಾಟ ಮಾಡಲೆಂದು ಆರೋಪಿಗಳು ಕಾರಿನಲ್ಲಿ ಹಾವಿನೊಂದಿಗೆ ಮೈಸೂರಿನತ್ತ ಬರುತ್ತಿದ್ದಾರೆ ಎಂಬ ಖಚಿತ ಮಾಹಿತಿ ಆಧರಿಸಿ ತಾಲ್ಲೂಕಿನ ಸಿದ್ಧಲಿಂಗಪುರದ ಬಳಿ ತಪಾಸಣೆ ನಡೆಸಲಾಯಿತು. ಈ ವೇಳೆ ಆರೋಪಿಗಳನ್ನು ಬಂಧಿಸಲಾಯಿತು’ ಎಂದು ಡಿಸಿಎಫ್ ಪೂವಯ್ಯ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಆರ್‌ಎಫ್‌ಒ ವಿವೇಕ್, ಸಿಬ್ಬಂದಿಯಾದ ಲಕ್ಷ್ಮೀಶ, ಮೋಹನ್, ಮಹಂತೇಶ್‌ ನಾಯಕ, ಕೊಟ್ರೇಶ್, ರವಿಕುಮಾರ್, ರವಿನಂದನ್, ಮಧು, ಪುಟ್ಟಸ್ವಾಮಿ, ವಿರೂಪಾಕ್ಷ ಕಾರ್ಯಾಚರಣೆ ತಂಡದಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.