ADVERTISEMENT

ಸರಗೂರು | ನೇಣು ಬಿಗಿದು ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2025, 7:35 IST
Last Updated 25 ಆಗಸ್ಟ್ 2025, 7:35 IST
ಜ್ಯೋತಿ
ಜ್ಯೋತಿ   

ಸರಗೂರು: ತಾಲ್ಲೂಕಿನ ಚಾಮಲಾಪುರ ಗ್ರಾಮದ ಜ್ಯೋತಿ (36) ಎಂಬವರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿದ್ದಾರೆ.

ಆತ್ಮಹತ್ಯೆಗೂ ಮುನ್ನ ಮೊಬೈಲ್‌ ಫೋನ್‌ನಲ್ಲಿ ದಾಖಲಿಸಿದ ವಿಡಿಯೊ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ  ಹರಿದಾಡುತ್ತಿದೆ. ಸರಗೂರು ಪೊಲೀಸ್ ಠಾಣೆಯಲ್ಲಿ ಭಾನುವಾರ ದೂರು ದಾಖಲಾಗಿದೆ.

ಮೃತರಿಗೆ ಪತಿ, ಒಬ್ಬರು ಪುತ್ರ, ಪುತ್ರಿ ಇದ್ದಾರೆ. ಮೈಕ್ರೋಫೈನಾನ್ಸ್ ಸಂಸ್ಥೆಯ ಸಿಬ್ಬಂಯ ಕಿರುಕುಳ ತಾಳಲಾರದೆ  ಜ್ಯೋತಿ ಆತ್ಮಹತ್ಯೆ ಮಾಡಿದ್ದಾರೆ ಎಂದು ಪತಿ ಕೃಷ್ಣ ನಾಯಕ ಸರಗೂರು ಪೊಲೀಸ್ ಠಾಣೆಗೆ ನೀಡಿದ  ದೂರಿನಲ್ಲಿ ತಿಳಿಸಿದ್ದಾರೆ.

ADVERTISEMENT

‘ಜ್ಯೋತಿ ಐದು ತಿಂಗಳ ಹಿಂದೆ ಧರ್ಮಸ್ಥಳ ಸಂಘದಿಂದ ₹2 ಲಕ್ಷ ಸಾಲ ಪಡೆದಿದ್ದರು.  ಕೈ ಸಾಲವಾಗಿ ₹3 ಲಕ್ಷ  ಪಡೆದಿದ್ದರು. ಸಂಘದ ಬಾಬ್ತು ₹1700 ಕಂತು ಹಣ ಪಾವತಿಸುವಂತೆ ಸಂಘದ ಪ್ರತಿನಿಧಿಯೊಬ್ಬರು ಮನೆಯ ಬಳಿ ಬಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಇದರಿಂದ ಮನನೊಂದು ಪತ್ನಿ ಜ್ಯೋತಿ ಡೆತ್‌ನೋಟ್ ಬರೆದಿಟ್ಟು ಆತ್ಯಹತ್ಯೆ ಮಾಡಿಕೊಂಡಿದ್ದಾರೆ’ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಮೊಬೈಲ್, ಡೆತ್‌ನೋಟ್‌ ಪಡೆದು ಮೇಲಾಧಿಕಾರಿಗಳಿಗೆ ರವಾನಿಸಲಾಗಿದೆ’ ಎಂದು ಪಿಎಸ್‌ಐ ಆರ್.ಕಿರಣ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.