ಹುಣಸೂರು: ಬೇಸಿಗೆ ರಜಾ ಮುಗಿಸಿದ ಚಿಣ್ಣರು ಶುಕ್ರವಾರ ಶಾಲೆಗೆ ಬಣ್ಣ ಬಣ್ಣದ ಬಟ್ಟೆ ತೊಟ್ಟು ಪೋಷಕರೊಂದಿಗೆ ಆಗಮಿಸಿ ಸಂಭ್ರಮಿಸಿದರು.
ಪೋಷಕರೊಂದಿಗೆ ದೇವಗಳ್ಳಿ ಸರ್ಕಾರಿ ಶಾಲೆಗೆ ಆಗಮಿಸಿದ ಮಕ್ಕಳನ್ನು ಬರಮಾಡಿಕೊಳ್ಳಲು ಶಾಲಾ ಶಿಕ್ಷಕರು ಮತ್ತು ಶಾಲಾಭಿವೃದ್ಧಿ ಸಮಿತಿ ಸದಸ್ಯರು ಶಾಲಾ ಅಂಗಳವನ್ನು ಬಲೂನ್, ರಂಗೋಲಿ ಹಾಗೂ ಹಸಿರು ತೋರಣದಿಂದ ಅಲಂಕರಿಸಿದ್ದರು.
ಗ್ರಾಮದ ಹಿರಿಯ ವೀರರಾಜೇ ಅರಸು, ನಾಗರಾಜೇ ಅರಸು ಅನಿಲ್ ಗೌಡರು ಪಂಚಾಯಿತಿ ಸದಸ್ಯ ಮೀನಾಕ್ಷಮ್ಮಣ್ಣಿ ಮೊದಲ ದಿನ ಶಾಲೆಗೆ ಬಂದ ಚಿಣ್ಣರಿಗೆ ಸಿಹಿ ವಿತರಿಸಿದರು. ಏಕಲ್ ಸಂಸ್ಥೆಯ ಕಿರಣ್ ಗೋವಿತ್ ಮಕ್ಕಳಿಗೆ ಸಿಹಿ ಜೊತೆಗೆ ನೋಟ್ ಪುಸ್ತಕ ವಿತರಿಸಿ ಬರ ಮಾಡಿಕೊಂಡರು.
ನಗರದ ಶಾಸ್ತ್ರಿ ವಿದ್ಯಾಸಂಸ್ಥೆಯಲ್ಲಿ ವಿದ್ಯಾರ್ಥಿಗಳ ಹಣೆಗೆ ತಿಲಕವಿಟ್ಟು ಶಿಕ್ಷಕರು ಮಕ್ಕಳನ್ನು ಬರಮಾಡಿಕೊಂಡರು. ಶಾಲೆಯಲ್ಲಿ ಸೆಲ್ಫಿ ಕೇಂದ್ರ ಸ್ಥಾಪಿಸಿ ಮಕ್ಕಳು ಸೆಲ್ಫಿ ತೆಗೆದುಕೊಳ್ಳುವಲ್ಲಿ ನಿರತರಾಗಿದ್ದರು. ತರಗತಿಗೆ ತೆರಳುವ ಮುನ್ನ ಸರಸ್ವತಿ ಗೀತೆ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗಿಯಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.