ADVERTISEMENT

ರಾಷ್ಟ್ರೀಯ ವಿಜ್ಞಾನ ಚಲನಚಿತ್ರೋತ್ಸವಕ್ಕೆ ಆಯ್ಕೆ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2020, 21:06 IST
Last Updated 18 ನವೆಂಬರ್ 2020, 21:06 IST
ಶಿವಮೂರ್ತಿ
ಶಿವಮೂರ್ತಿ   

ಮೈಸೂರು: ಮೈಸೂರಿನ ಎನ್.ಶಿವಮೂರ್ತಿ ನಿರ್ದೇಶಿಸಿರುವ ‘ಬಯೋಡೈವರ್ಸಿಟಿ ಆಫ್‌ ತ್ರಿಪುರ’ ಸಾಕ್ಷ್ಯಚಿತ್ರವು ಕೇಂದ್ರ ಸರ್ಕಾರದ ವಿಜ್ಞಾನ್ ಪ್ರಸಾರ ಆಯೋಜಿಸಿರುವ 10ನೇ ರಾಷ್ಟ್ರೀಯ ವಿಜ್ಞಾನ ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ.

ತ್ರಿಪುರದ ಅಗರ್ತಲಾದಲ್ಲಿ ನ.24ರಿಂದ 27ರ ವರೆಗೆ ವರ್ಚುವಲ್ ವೇದಿಕೆ ಮೂಲಕ ನಡೆಯಲಿರುವ ಚಲನಚಿತ್ರೋತ್ಸವದಲ್ಲಿ ಈ ಸಾಕ್ಷ್ಯಚಿತ್ರ ಪ್ರದರ್ಶನಗೊಳ್ಳಲಿದೆ. ಮಾನಸ ಗಂಗೋತ್ರಿಯಲ್ಲಿರುವ ಎಜುಕೇಷನಲ್‌ ಮಲ್ಡಿಮೀಡಿಯಾ ರಿಸರ್ಚ್‌ ಸೆಂಟರ್‌ (ಇಎಂಆರ್‌ಸಿ) ವಿಭಾಗದಲ್ಲಿ ಕಿರಿಯ ಸಂಶೋಧನಾಧಿಕಾರಿಆಗಿರುವ ಆ್ಯರನ್‌ ಮಾರ್ಗದರ್ಶನದಲ್ಲಿ ಈ ಸಾಕ್ಷ್ಯಚಿತ್ರ ನಿರ್ಮಿಸಿ, ನಿರ್ದೇಶಿಸಿದ್ದಾರೆ. ಎಂಟು ನಿಮಿಷಗಳ ಸಾಕ್ಷ್ಯಚಿತ್ರವು ತ್ರಿಪುರದ ಜೀವವೈವಿಧ್ಯದ ಮೇಲೆ ಬೆಳಕು ಚೆಲ್ಲಿದೆ.

‘ಮೊದಲ ಬಾರಿ ನಿರ್ಮಿಸಿದ ಸಾಕ್ಷ್ಯಚಿತ್ರವು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುವುದು ಖುಷಿ ತಂದಿದೆ. 15 ದಿನಗಳಲ್ಲಿ ನಿರ್ಮಿಸಿ ಸ್ಪರ್ಧೆಗೆ ಕಳುಹಿಸಿದ್ದೆ’ ಎಂದು ಶಿವಮೂರ್ತಿ ಪ್ರತಿಕ್ರಿಯಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.