ADVERTISEMENT

ಸೇವಾ ಮನೋಭಾವವೇ ರೋಟರಿ ಗುರಿ: ಅಭಿನಂದನ್ ಎ.ಶೆಟ್ಟಿ

​ಪ್ರಜಾವಾಣಿ ವಾರ್ತೆ
Published 13 ಜುಲೈ 2024, 16:22 IST
Last Updated 13 ಜುಲೈ 2024, 16:22 IST
ಮೈಸೂರಿನ ರೋಟರಿ ಐವರಿ ಸಿಟಿ ವತಿಯಿಂದ ಇತ್ತೀಚೆಗೆ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನಡೆಯಿತು. ಅಭಿನಂದನ್ ಎ.ಶೆಟ್ಟಿ, ಕೆ.ಶಶಿಧರ್, ಸಂಜಯ್ ಅರಸ್, ಶೋಭಾ ನಾಗರಾಜ್, ಪ್ರಹ್ಲಾದ್, ಎಸ್.ಬಾಲಚಂದರ್ ಭಾಗವಹಿಸಿದ್ದರು
ಮೈಸೂರಿನ ರೋಟರಿ ಐವರಿ ಸಿಟಿ ವತಿಯಿಂದ ಇತ್ತೀಚೆಗೆ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನಡೆಯಿತು. ಅಭಿನಂದನ್ ಎ.ಶೆಟ್ಟಿ, ಕೆ.ಶಶಿಧರ್, ಸಂಜಯ್ ಅರಸ್, ಶೋಭಾ ನಾಗರಾಜ್, ಪ್ರಹ್ಲಾದ್, ಎಸ್.ಬಾಲಚಂದರ್ ಭಾಗವಹಿಸಿದ್ದರು   

ಮೈಸೂರು: ‘ಜನರ ಕಷ್ಟಗಳಿಗೆ ಸ್ಪಂದಿಸುವುದು ಹಾಗೂ ಸೇವಾ ಮನೋಭಾವವೇ ರೋಟರಿ ಸಂಸ್ಥೆಯ ಮುಖ್ಯ ಉದ್ದೇಶ’ ಎಂದು ಸಂಸ್ಥೆಯ ಅಭಿನಂದನ್ ಎ.ಶೆಟ್ಟಿ ಹೇಳಿದರು.

ನಗರದ ರೋಟರಿ ಐವರಿ ಸಿಟಿ ಮೈಸೂರು ವತಿಯಿಂದ ಇತ್ತೀಚೆಗೆ 2024–25ರ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಜನರಿಗೆ ಸಹಾಯ, ಸಹಕಾರ ನೀಡುವುದರ ಮೂಲಕ ಸಮುದಾಯಕ್ಕೆ ಸಹಾಯಹಸ್ತ ನೀಡುವುದು ಗುರಿಯಾಗಿದೆ. ಸಮಾಜದಲ್ಲಿ ನೊಂದ ಕುಟುಂಬಗಳನ್ನು ಗುರುತಿಸಿ, ಅವರಿಗೆ ಆರ್ಥಿಕ ನೆರವು, ಆರೋಗ್ಯ, ಶಿಕ್ಷಣ, ಸ್ವ–ಉದ್ಯೋಗ ಕಲ್ಪಿಸಲಾಗುವುದು. ಇದರೊಂದಿಗೆ ಸಾಮಾಜಿಕ ಸೇವೆಯ ತೃಪ್ತಿ ಕಾಣಬಹುದು’ ಎಂದರು.

ADVERTISEMENT

‘ಸರ್ಕಾರವನ್ನು ಅವಲಂಬಿಸದೇ ಸಾರ್ವಜನಿಕವಾಗಿ ಸಂಘ ಸಂಸ್ಥೆಗಳು ಕೂಡ ಕೈ ಜೋಡಿಸಿ ಸಮಾಜ ಸೇವಾ ಕಾರ್ಯಗಳಲ್ಲಿ ಗುರುತಿಸಿಕೊಂಡಾಗ ಉತ್ತಮ ಸಮಾಜ ನಿರ್ಮಿಸಬಹುದು’ ಎಂದು ತಿಳಿಸಿದರು.

ನೂತನವಾಗಿ ಆಯ್ಕೆಯಾದ ರೋಟರಿ ಐವರಿ ಸಿಟಿ ಅಧ್ಯಕ್ಷ ಕೆ.ಶಶಿಧರ್ ಮಾತನಾಡಿ, ‘ಈ ವರ್ಷ ಹಲವು ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಸಂಸ್ಥೆಯ ಗುರಿ ತಲುಪುವಲ್ಲಿ ಕಾರ್ಯೋನ್ಮುಖರಾಗುತ್ತೇವೆ. ಸಮುದಾಯಗಳ ಬಗ್ಗೆ ಜಾಗೃತಿ, ಅರಿವು, ಕಾಳಜಿಯಿಂದ ಕರ್ತವ್ಯ ನಿರ್ವಹಿಸುತ್ತೇವೆ’ ಎಂದರು.

ಕಾರ್ಯಕ್ರಮದಲ್ಲಿ ನಿರ್ವಾಣ ಯೋಗ ಕೇಂದ್ರದ ಗುರೂಜಿ ಶಶಿಕುಮಾರ್, ಸ್ವಾಮಿ ವಿವೇಕಾನಂದ ಯುವ ಕೇಂದ್ರದ ಕಾರ್ಯಕ್ರಮ ವ್ಯವಸ್ಥಾಪಕಿ ನಂದಿನಿ ಶಂಕರ್ ಅವರನ್ನು ಸನ್ಮಾನಿಸಲಾಯಿತು.

ಮಾಜಿ ಅಧ್ಯಕ್ಷರಾದ ಸಂಜಯ್ ಅರಸ್, ಕಾರ್ಯದರ್ಶಿ ಶೋಭಾ ನಾಗರಾಜ್, ಪ್ರಹ್ಲಾದ್, ಖಜಾಂಚಿ ಎಸ್.ಬಾಲಚಂದರ್, ಸಹಾಯಕ ಕಾರ್ಯದರ್ಶಿ ಇಫ್ತಿಕರ್ ಅಹಮ್ಮದ್, ಉಪಾಧ್ಯಕ್ಷರಾದ ಎಂ.ಕೆ.ಮುಕೇಶ್, ಸುನಿಲ್ ಬಾಳಿಗಾ, ಎಂ.ಕೆ.ಸಚ್ಚಿದಾನಂದನ್, ಮಂಜುಳಾ ಬಾಲಚಂದರ್, ಬಿ.ಜಿ.ನಾಗರಾಜು, ಶಬನಾ ಇಫ್ತಿಕರ್, ಕೇಶವ್ ಬಿ.ಕಾಂಚನ್, ಬಾಬು ಅತ್ತರ್, ಜ್ಯೋತಿ ಮುಖೇಶ್, ಪೂಜಾ ಬಾಳಿಗಾ, ಲತಾ ಸಚ್ಚಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.