ADVERTISEMENT

ಚಿಂತಕ ರಾಜುಗೌಡರಿಗೆ ಸೇವಾಭೂಷಣ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2024, 15:57 IST
Last Updated 27 ಸೆಪ್ಟೆಂಬರ್ 2024, 15:57 IST
ಬಿ. ಸೀಹಳ್ಳಿ ರಾಜುಗೌಡ
ಬಿ. ಸೀಹಳ್ಳಿ ರಾಜುಗೌಡ   

ತಿ.ನರಸೀಪುರ: ತಾಲ್ಲೂಕಿನ‌ ಬನ್ನೂರು ಹೋಬಳಿಯ ಬಿ.‌ಸೀಹಳ್ಳಿ ಗ್ರಾಮದ ಸಾಮಾಜಿಕ ಚಿಂತಕ ಎಸ್.ಕೆ. ರಾಜುಗೌಡ ಅವರು ‘ಸೇವಾ ಭೂಷಣ’ ಪ್ರಶಸ್ತಿಗೆ ಆಯ್ಕೆ ಯಾಗಿದ್ದಾರೆ.

ಎಸ್.ಕೆ.ರಾಜೂಗೌಡ ಅವರು ಸಕ್ರಿಯವಾಗಿ ಕನ್ನಡಪರ, ರೈತಪರ, ಶೋಷಿತರ ಪರ ಹಾಗೂ ಸರ್ಕಾರಿ ಕನ್ನಡ ಶಾಲೆಗಳ ಉಳಿವಿಗಾಗಿ ನಡೆದ ಹೋರಾಟ ಮತ್ತು ಕಾವೇರಿ ಹೋರಾಟ ಸೇರಿದಂತೆ ಸಾಮಾಜಿಕ, ಸಾಂಸ್ಕೃತಿಕ, ವೈಚಾರಿಕ ಮತ್ತು ವೈಜ್ಞಾನಿಕ, ಜನಪರ, ಸಂವಾದ ಮತ್ತು ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಕರ್ನಾಟಕ ರಾಜ್ಯ ಒಕ್ಕಲಿಗರ ವಿಕಾಸ ವೇದಿಕೆಯ 13ನೇ ವಾರ್ಷಿಕೋತ್ಸವದ ಅಂಗವಾಗಿ ಮೈಸೂರಿನಲ್ಲಿ ಸೆ.28 ರಂದು ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.