ADVERTISEMENT

ಇಬ್ಬರು ಬಾಲಕಿಯರಿಗೆ ಪಾರ್ಕ್‌ನಲ್ಲಿ ಲೈಂಗಿಕ ಕಿರುಕುಳ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2019, 14:40 IST
Last Updated 1 ಏಪ್ರಿಲ್ 2019, 14:40 IST
   

ಮೈಸೂರು: ನಗರದ ಉದ್ಯಾನವೊಂದರಲ್ಲಿ 10 ವರ್ಷದ ಇಬ್ಬರು ಬಾಲಕಿಯರಿಗೆ ಹಾಡಹಗಲೇ ಲೈಂಗಿಕ ಕಿರುಕುಳ ನೀಡಿದ ಇಬ್ಬರು ವ್ಯಕ್ತಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಬ್ಬರೂ ಬಾಲಕಿಯರ ಮನೆಯ ಸಮೀಪ ವಾಸವಿದ್ದು, ಪರಿಚಿತರೇ ಆಗಿದ್ದಾರೆ.

ಭಾನುವಾರ ಸಂಜೆ ಮನೆಯ ಮುಂದೆ ಆಟವಾಡುತ್ತಿದ್ದ ಬಾಲಕಿಯರಿಗೆ ಚಾಕಲೇಟ್‌ ಕೊಡಿಸುವ ಆಮಿಷ ಒಡ್ಡಿದ 24 ವರ್ಷದ ಯುವಕ ಬೈಕ್‌ನಲ್ಲಿ ಉದ್ಯಾನಕ್ಕೆ ಕರೆದುಕೊಂಡು ಹೋಗಿ ಇಬ್ಬರನ್ನೂ ಲೈಂಗಿಕವಾಗಿ ಬಳಸಿಕೊಂಡಿದ್ದಾನೆ. ಇದನ್ನು ನೋಡಿದ 53 ವರ್ಷದ ವ್ಯಕ್ತಿಯು ಯುವಕನನ್ನು ಬೈಯ್ದು ಓಡಿಸುವ ನಾಟಕವಾಡಿದ್ದಾನೆ. ಬಳಿಕ ಬಾಲಕಿಯರಿಗೆ ಈತನೂ ಲೈಂಗಿಕ ಕಿರುಕುಳ ನೀಡಿದ್ದಾನೆ. ರಾತ್ರಿ ಮನೆಗೆ ಬಂದ ಬಾಲಕಿಯರು, ಪೋಷಕರಿಗೆ ಈ ವಿಷಯ ತಿಳಿಸಿದ್ದಾರೆ.

ದೂರು ಸ್ವೀಕರಿಸುತ್ತಿದ್ದಂತೆ ಕಾರ್ಯಾಚರಣೆ ನಡೆಸಿದ ಪೊಲೀಸರು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.